ಅಂತರ್ ರಾಜ್ಯ ಜಿಂಕೆ ಬೇಟೆಗಾರರ ಬಂಧನ

655

ಕಲಬುರಗಿ: ಕಲಬುರಗಿಯ ಶಾರ್ಪ್ ಶೂಟರ್ ಸೇರಿದಂತೆ ಅಂತರ್ ರಾಜ್ಯ ಜಿಂಕೆ ಬೇಟೆಗಾರರನ್ನ ಬಂಧಿಸಲಾಗಿದೆ. ಹೈಫೈ ಕಾರಿನಲ್ಲಿ ಜಿಂಕೆ ಮಾಂಸ, ಚರ್ಮ ಸಾಗಿಸ್ತಿದ್ದ ಖದೀಮರನ್ನ, ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ನಾಗಲಗೀತ ಮಂಡಲ ಗ್ರಾಮದಲ್ಲಿ ಬಂಧಿಸಲಾಗಿದೆ. ಕಲಬುರಗಿಯ ಮಹಮ್ಮದ್ ಶಾಕೀರ್, ಮಹಮ್ಮದ್ ಅಬ್ದುಲ್ ವಾಹಬ್, ಮಹಮ್ಮದ್ ನಿಜಾಜ್, ಹೈದರಾಬಾದಿನ ಮಹಮ್ಮದ್ ಮುಕ್ರಂ ಹಾಗೂ ಮಹಮ್ಮದ್ ಮುನೀರ್ ಬಂಧಿತ ಆರೋಪಿಗಳಾಗಿದ್ದಾರೆ.

ಬೇಟೆಗೆ ಬಳಸಿದ ಸ್ಕಾರ್ಪಿಯೋ ವಾಹನ, 30.60 ಸ್ಪೋರ್ಟ್ಸ್ ರೈಫಲ್, 12 ಜೀವಂತ ಗುಂಡು, 4 ಚಾಕು, ಜಿಂಕೆ ಮಾಂಸ, ಚರ್ಮವನ್ನ ನಾರಾಯಣಖೇಡ್ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿ ಮಹಮ್ಮದ್ ಶಾಕೀರ್ ಕಲಬುರ್ಗಿಯ ಶಾರ್ಪ್ ಶೂಟರ್, ರೈಫಲ್ ಅಸೋಸಿಯೇಷನ್ ಸ್ಪೋರ್ಟ್ ಮೆಂಬರ್ ಆಗಿದ್ದಾನೆ. ಸ್ಪೋರ್ಟ್ಸ್ ಗಾಗಿ 30.60 ರೈಫಲ್ ಲೈಸೆನ್ಸ್ ಪಡೆದು ಬೇಟೆಗೆ ಬಳಸಿದ ಆರೋಪವಿದ್ದು, ಸಂಗಾರೆಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


TAG


Leave a Reply

Your email address will not be published. Required fields are marked *

error: Content is protected !!