48 ಮರಿಗಳಿಗೆ ಜನ್ಮ ನೀಡಿದ ರಸಲ್ ವೈಫರ್ ಹಾವು

338

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ರಸಲ್ ವೈಫರ್ (ಕೊಳಕ ಮಂಡಲ) ಹಾವೊಂದು ಬರೋಬ್ಬರಿ 48 ಮರಿಗಳಿಗೆ ಜನ್ಮ ನೀಡಿದೆ. ನಗರದ ಸ್ನೇಕ್ ಸಂಗಮೇಶ ಎಂಬುವರ ಮನೆಯಲ್ಲಿದ್ದ ಕೊಳಕ ಮಂಡಲ ಹಾವು, ಬರೋಬ್ಬರಿ 48 ಮರಿಗಳಿಗೆ ಜನ್ಮ ನೀಡಿದೆ.

ರಸಲ್ ವೈಫರ್ ಹಾವಿಗೆ ತಲೆಗೆ ಪೆಟ್ಟು ಬಿದ್ದು ಗಾಯಗೊಂಡಾಗ ಸ್ನೇಕ್ ಸಂಗಮೇಶ ಅದನ್ನ ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದರು. ಚಿಕಿತ್ಸೆ ನೀಡಿದ ಬಳಿಕ ಕಾಡಿಗೆ ಬಿಡುವ ವೇಳೆಯಲ್ಲಿ ಹಾವು ಗರ್ಭಧರಿಸುವುದು ತಿಳಿದಿದೆ. ಹೀಗಾಗಿ ಕಳೆದ ಎರಡು ದಿನಗಳಿಂದ ಅವರ ಮನೆಯಲ್ಲಿ ರಕ್ಷಣೆ ನೀಡಿದ್ರು. ಅದು ಇದೀಗ 48 ಮರಿಗಳಿಗೆ ಜನ್ಮ ನೀಡಿದೆ.

ಸಾಮಾನ್ಯವಾಗಿ ಹಾವುಗಳು ಮೊಟ್ಟೆ ಇಡುತ್ತವೆ. ಮೊಟ್ಟೆಯಿಂದ ಮರಿಗಳು ಆನಂತರ ಆಚೆ ಬರುತ್ತವೆ. ಆದ್ರೆ, ಈ ರಸಲ್ ವೈಫರ್ ಹಾವು, ಮರಿಗಳಿಗೆ ಜನ್ಮ ನೀಡುತ್ತೆ. ಹೀಗಾಗಿ ವಿಶೇಷವಾಗಿ ಗುರುತಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!