ಕರೋನಾ ಸೋಂಕಿಗೆ ಬಿಟೌನ್ ಖ್ಯಾತ ಸಿಂಗರ್ ನಿಧನ

328

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮುಂಬೈ: ಬಾಲಿವುಡ್ ನ ಖ್ಯಾತ ಗಾಯಕ ವಾಜಿದ್ ಖಾನ್ ನಿಧನರಾಗಿದ್ದಾರೆ. ಅವರಿಗೆ ಕರೋನಾ ಸೋಂಕು ತಲುಗಿದ ಕಾರಣ, ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 42 ವರ್ಷದ ಸಿಂಗರ್, ಮ್ಯೂಸಿಕ್ ಡೈರೆಕ್ಟರ್ ವಾಜಿದ್ ಖಾನ್ ಸೋಮವಾರ ನಸುಕಿನಜಾವ ನಿಧನರಾಗಿದ್ದಾರೆ.

ಕಳೆದ ರಾತ್ರಿ ಆರೋಗ್ಯದಲ್ಲಿ ತೀವ್ರ ತೊಂದರೆ ಕಾಣಿಸಿಕೊಂಡು ವೆಂಟಿಲೇಟರ್ ನಲ್ಲಿಡಲಾಗಿತ್ತು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಾಜಿದ್, ಕೆಲ ತಿಂಗಳುಗಳ ಹಿಂದೆಯಷ್ಟೆ ಕಿಡ್ನಿ ಕಸಿ ಮಾಡಿಕೊಂಡಿದ್ರಂತೆ.

ವಾಜಿದ್ ಹಾಗೂ ಸಹೋದರ ಸಾಜಿದ್ ಕಾಂಬಿನೇಷನ್ ಸಾಕಷ್ಟು ಹೆಸರು ಮಾಡಿತ್ತು. ಬಾಲಿವುಡ್ ನಲ್ಲಿ ಸಾಜಿದ್ ವಾಜಿದ್ ಜೋಡಿಯೆಂದೇ ಖ್ಯಾತಿ ಗಳಿಸಿದ್ರು. 1998ರಲ್ಲಿ ಸಲ್ಲು ಅಭಿನಯದ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ ಚಿತ್ರದ ಮೂಲಕ ಸಿನಿ ದುನಿಯಾಗೆ ಎಂಟ್ರಿಯಾಗಿದ್ರು. ಮುಜ್ಸೆ ಶಾದಿ ಕರೋಗಿ, ಹಲೋ ಬ್ರದರ್, ದಬಾಂಗ್, ಚೋರಿ ಚೋರಿ, ವಾಂಟೆಡ್, ಪಾರ್ಟ್ನರ್ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಗಾಯನದ ಮೂಲಕ ಮೋಡಿ ಮಾಡಿದ್ರು. ಇತ್ತೀಚೆಗೆ ಸಲ್ಮಾನ್ ಖಾನ್ ಜೊತೆಗೂಡಿ ಪ್ಯಾರ್ ಕರೋನಾ ಹಾಗೂ ಭಾಯಿ ಭಾಯಿ ಅನ್ನೋ ಸಾಂಗ್ ರಿಲೀಸ್ ಮಾಡಿದ್ರು.

ಗಾಯಕ ವಾಜಿದ್ ಖಾನ್ ನಿಧನಕ್ಕೆ ಬಾಲಿವುಡ್ ಮಂದಿ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಇಂದು ನಡೆಯುವ ಅಂತ್ಯಸಂಸ್ಕಾರದ ವೇಳೆ ಕುಟುಂಬ ವರ್ಗ, ಆಪ್ತ ಬಳಗ ಮಾತ್ರ ಪಾಲ್ಗೊಳ್ಳಲಿದೆ.




Leave a Reply

Your email address will not be published. Required fields are marked *

error: Content is protected !!