ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತನಿಗೆ ಗೌರವ ಡಾಕ್ಟರೇಟ್

233

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹೊಸತನಕ್ಕೆ ಕೈ ಹಾಕಿದ್ದು, ಇತರರಿಗೂ ಮಾದರಿಯಾಗುವಂತಹ ನಿರ್ಧಾರ ಮಾಡಿದೆ. ಅದುವೇ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತನಿಗೆ ಗೌರವ ಡಾಕ್ಟರೇಟ್ ನೀಡುವುದು.

ಈ ಬಗ್ಗೆ ಮಾತನಾಡಿರುವ ಕುಲಪತಿ ಡಾ.ಎಸ್ ರಾಜೇಂದ್ರ ಪ್ರಸಾದ್, ಮುಂದಿನ ವರ್ಷದ ಕೃಷಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದಿದ್ದಾರೆ. ಈ ವರ್ಷವೇ ಈ ಕೆಲಸ ಮಾಡಬೇಕಿತ್ತು. ಆದರೆ, ಕೋವಿಡ್ ಕಾರಣಕ್ಕೆ ಮಾಡಲು ಆಗಲಿಲ್ಲವೆಂದು ತಿಳಿಸಿದರು.

ಕೃಷಿ ಕ್ಷೇತ್ರದಲ್ಲಿ ಹೊಸ ಆವಿಸ್ಕಾರ, ಆದಯ ಗಳಿಕೆಗೆ ಹೊಸ ರೀತಿಯ ಮಾರ್ಗ, ಪ್ರಗತಿ ಪರ ರೈತನಾಗಿ ಗುರುತಿಸಿಕೊಂಡಿರುವ ಒಬ್ಬರನ್ನು ಹುಡುಕಿ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!