ಬ್ಲೂ ಬಾಯ್ಸ್ ಟ್ರಂಪ್ ಕಾರ್ಡ್ ಯಾರು?

511

ಮುಂಬಯಿ: ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಆಲ್‌ರೌಂಡರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದು, ಹಾರ್ದಿಕ್ ಪಾಂಡ್ಯ ಅವರಲ್ಲಿ ಓರ್ವರಾಗಿದ್ದಾರೆ ಎಂದು 2007 ಹಾಗೂ 2011ರ ವಿಶ್ವಕಪ್ ವಿಜೇತ ಭಾರತ ತಂಡದ ಹೀರೊ ಆಗಿರುವ ಯುವರಾಜ್ ಸಿಂಗ್ಅಭಿಪ್ರಾಯಪಟ್ಟಿದ್ದಾರೆ.

2011ರ ಏಕದಿನ ವಿಶ್ವಕಪ್‌‌ನಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿರುವ ಯುವರಾಜ್ ಸಿಂಗ್ 362 ರನ್ ಹಾಗೂ 15 ವಿಕೆಟ್‌ಗಳನ್ನು ಕಬಳಿಸಿದರು.

ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಬಲ್ಲರು. ಈ ಬಗ್ಗೆ ಹಾರ್ದಿಕ್ ಜತೆಗೂ ಮಾತನಾಡಿದ್ದೇನೆ ಎಂದು ಯುವಿ ತಿಳಿಸಿದ್ದಾರೆ.

ಯುವರಾಜ್ ಸಿಂಗ್

ಹಾಗಿದ್ದರೂ ಹಾರ್ದಿಕ್ ಒತ್ತಡವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಅಷ್ಟೇ ಮುಖ್ಯವೆನಿಸುತ್ತದೆ ಎಂದರು. 
ಅದೇ ಹೊತ್ತಿಗೆ ಸ್ಪಿನ್ ಅಸ್ತ್ರಗಳಾದ ಯುಜ್ವೇಂದ್ರ ಚಹಲ್ ಹಾಗೂ ಕುಲ್‌ದೀಪ್ ಯಾದವ್ ಅವರನ್ನು ಆಡಿಸಬೇಕು. ಅಲ್ಲದೆ ತಂಡದ ಸ್ಟ್ರೆಂಗ್ತ್‌ಗೆ ತಕ್ಕಂತೆ ಯೋಜನೆ ರೂಪಿಸಬೇಕು ಎಂದರು.

ಹಾರ್ದಿಕ್ ಪಾಂಡೆ

ನಮ್ಮ ಬಲ ಸ್ಪಿನ್ನರ್‌ಗಳಾಗಿದ್ದಾರೆ. ಇದರಿಂದಾಗಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಯಶಸ್ಸನ್ನು ಸಾಧಿಸಿದ್ದೇವೆ. ಹಾಗಾಗಿ ನಾಲ್ಕು ಬೆಸ್ಟ್ ಬೌಲರ್‌ಗಳ ಜತೆಗೆ ಹಾರ್ದಿಕ್ ಅವರನ್ನು ಐದನೇ ಬೌಲರ್ ರೂಪದಲ್ಲಿ ಅವಕಾಶ ನೀಡಬೇಕು ಎಂದರು. 




Leave a Reply

Your email address will not be published. Required fields are marked *

error: Content is protected !!