ಪತಿಯನ್ನೇ ಕಿಡ್ನಾಪ್ ಮಾಡಿಸಿದ ಪತ್ನಿ.. ಕಾರಣ ಆ ಸುಂದರಿ…

411

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪತಿಯನ್ನೇ ಪತ್ನಿ ಕಿಡ್ನಾಪ್ ಮಾಡಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದ ಬಾಗಲಗುಂಟೆ ಪೊಲೀಸರಿಗೆ, ಇನ್ನೊಬ್ಬಳು ಸುಂದರಿ ಕಥೆ ತಿಳಿದಿದೆ.

ಶಾಹಿದ ಶೇಕ್ ಎಂಬಾತನನ್ನ ಆತನ ಪತ್ನಿ ರೋಮಾ ಶೇಕ್ ಜೂನ್ 7ರಂದು ಕಿಡ್ನಾಪ್ ಮಾಡ್ಸಿದ್ಳು. ಮೊದ್ಲೇ ನಾಲ್ವರಿಗೆ ಸೂಪಾರಿ ಕೊಟ್ಟಿದ್ದ ರೋಮಾ, ರಾತ್ರೋ ರಾತ್ರಿ ಪ್ಲಾನ್ ಮಾಡಿ ಮರುದಿನ ಮಧ್ಯಾಹ್ನ ಸಿನಿಮಾ ಸ್ಟೈಲ್ ನಲ್ಲಿ ಕಿಡ್ನಾಪ್ ಮಾಡಿಸಿದ್ಳು. ಬಳಿಕ ಒಬ್ಬಳಿಗೆ ಫೋನ್ ಮಾಡಿ 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾಳೆ. ಇದ್ರಿಂದ ಗಾಬರಿಯಾದ ಆಕೆ, ಪೊಲೀಸರ ಬಳಿ ಹೋಗಿ ಕಂಪ್ಲೇಟ್ ಕೊಟ್ಟಿದ್ದಾಳೆ.

ಹೀಗೆ ಪೊಲೀಸರ ಬಳಿ ದೂರು ನೀಡಲು ಹೋದ ರತ್ನ ಕಾತೂನ್ ಅನ್ನೋ ಮಹಿಳೆಯನ್ನ ವಿಚಾರಿಸಿದ್ರೆ ನಾನು ಅವನ ಹೆಂಡ್ತಿ ಎಂದಿದ್ದಾಳೆ. ಪ್ರಕರಣ ದಾಖಲಿಸಿಕೊಂಡು, ಫೀಲ್ಡ್ ಗೆ ಇಳಿದ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಈಕೆ ಅವನು ನನ್ನ ಗಂಡ. ಎರಡನೇ ಮದ್ವೆ ಮಾಡಿಕೊಂಡಿದ್ದಕ್ಕೆ ಹೀಗೆ ಮಾಡಿರುವುದಾಗಿ ಹೇಳಿದ್ದಾಳೆ.




Leave a Reply

Your email address will not be published. Required fields are marked *

error: Content is protected !!