ಕೋಲಾರ ಯುವತಿ ಕಿಡ್ನಾಪ್ ಕೇಸ್: ಆಕೆ ತಪ್ಪಿಸಿಕೊಂಡು ಬಂದಿದ್ದೇಗೆ?

345

ಪ್ರಜಾಸ್ತ್ರ ಅಪರಾಧ ಸುದ್ದಿ

ಕೋಲಾರ: ಕಳೆದ ಗುರುವಾರ ನಗರದಲ್ಲಿ ಹಾಡಹಗಲೇ 23 ವರ್ಷದ ಯುವತಿಯನ್ನ ಅಪಹರಣ ಮಾಡಲಾಗಿತ್ತು. ಅಪಹರಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಘಟನೆಯಿಂದ ನಗರದ ಜನತೆ ಬೆಚ್ಚಿಬಿದ್ದಿದ್ರು. ಇದೀಗ ಯುವತಿ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿದ್ದಾಳೆ.

ಶುಕ್ರವಾರ ಯುವತಿ ಅದ್ಹೇಗೋ ತಪ್ಪಿಸಿಕೊಂಡು ಬಂದಿದ್ದಾಳೆ. ಬಳಿಕ ಸ್ಥಳೀಯರ ಸಹಾಯ ಪಡೆದು ಕುಟುಂಬಸ್ಥರಿಗೆ ಫೋನ್ ಮಾಡಿದ್ದಾಳೆ. ತುಮಕೂರು ಪೊಲೀಸರಿಗೆ ಫೋನ್ ಮಾಡಿ ಯುವತಿಯಿದ್ದ ಸ್ಥಳದ ಮಾಹಿತಿ ನೀಡಲಾಗಿದೆ. ಅಲ್ಲಿಗೆ ತೆರಳಿದ ಪೊಲೀಸ್ರು ಯುವತಿಯನ್ನ ಸುರಕ್ಷಿತವಾಗಿ ಕರೆದುಕೊಂಡು ಬಂದು ಪೋಷಕರಿಗೆ ಒಪ್ಪಿಸಿದ್ದಾರೆ.

ಕಿಡ್ನಾಪ್ ಮಾಡಿದ ಯುವಕ ಶಿವು ಹಾಗೂ ಯುವತಿ ಪ್ರೀತಿ ಮಾಡ್ತಿದ್ರು. ಮದುವೆ ವಿಚಾರದಲ್ಲಿ ಯುವತಿ ಪೋಷಕರು ಒಪ್ಪಿಕೊಂಡಿಲ್ಲ. ಹೀಗಾಗಿ ಕಳೆದ ಗುರುವಾರ ಯುವತಿ ಸಹೋದರಿ ಜೊತೆಗೆ ನಡೆದುಕೊಂಡು ಹೋಗುವಾಗ ಕಿಡ್ನಾಪ್ ಮಾಡಿದ್ದ. ಬಳಿಕ ತುಮಕೂರಿನ ಲಾಡ್ಜ್ ವೊಂದರಲ್ಲಿ ಕೂಡಿಹಾಕಿದ್ದ. ಅಲ್ದೇ ಭಾನುವಾರ ಯುವತಿಯನ್ನ ಮದುವೆಯಾಗುವ ಪ್ಲಾನ್ ಮಾಡಿದ್ದ. ಯುವತಿ ರಕ್ಷಣೆಗಾಗಿ ಪೊಲೀಸ್ರು ಎರಡು ಟೀಂ ರೆಡಿ ಮಾಡಿದ್ರು. ಯುವತಿ ತಪ್ಪಿಸಿಕೊಂಡು ಬಂದ ಪರಿಣಾಮ ಆಕೆಯನ್ನ ಹುಡುಕಿಕೊಂಡು ಬಂದಿದ್ರು. ಆಗ ಪೊಲೀಸ್ರು ಅವರನ್ನ ಬೆನ್ನು ಹತ್ತಿದಾಗ ಎಸ್ಕೇಪ್ ಆಗಿದ್ದಾರೆ. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕೋಲಾರ ಎಸ್ಪಿ ಕಾರ್ತಿಕ ರೆಡ್ಡಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!