‘ಕ್ವೀನ್’ ಎರಡು ರಾಷ್ಟ್ರೀಯ ಪಕ್ಷಗಳ ಟಿಕೆಟ್ ನಿರಾಕರಿಸಿದ್ಯಾಕೆ?

265

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟಿ ಕಂಗನಾ ರಣೌತ್ ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರ್ತಾರೆ. ತನ್ನ ನಟನೆಯ ಮೂಲಕ ಎಲ್ಲರನ್ನ ಸೆಳೆಯುವ ನಟಿ ನೇರ ಮಾತಿನ ಮೂಲಕ ಹಲವರು ವಿರೋಧ ಕಟ್ಟಿಕೊಂಡವಳು. ಇಂಥಾ ನಟಿ ಇಂದು ಪ್ರಧಾನಿ ಮೋದಿ ಭಾಷಣ ಮೆಚ್ಚಿ ಟ್ವೀಟ್ ಮಾಡಿದ್ಳು. ಇದಕ್ಕೆ ಕೆಲವರು ಕಂಗನಾ ಬಿಜೆಪಿ ಸೇರ್ತಾಳೆ ಅಂತಾ ಹೇಳ್ತಿದ್ರು.

ಬಿಜೆಪಿ ಸೇರುವ ಕುರಿತು ಮಾತ್ನಾಡಿರುವ ಕಂಗನಾ, ಈ ಮೊದ್ಲು ನನ್ಗೆ ಕಾಂಗ್ರೆಸ್ ಟಿಕೆಟ್ ನೀಡಲು ಮುಂದೆ ಬಂದಿದ್ರು. ನನ್ನ ಮಣಿಕರ್ಣಿಕಾ ಚಿತ್ರ ನೋಡಿದ್ಮೇಲೆ ಬಿಜೆಪಿಯವರು ಸಹ ಟಿಕೆಟ್ ನೀಡಲು ಬಂದ್ರು. ಆದ್ರೆ, ನನ್ಗೆ ರಾಜಕೀಯ ಇಷ್ಟವಿಲ್ಲ. ರಾಜಕೀಯ ಆಲೋಚನೆ ಸಹ ಇಲ್ಲ ಎಂದಿದ್ದಾರೆ.

ಇನ್ನು ತಮ್ಮ ತಾತ ಸತತ 15 ವರ್ಷಗಳ ಕಾಲ ಕಾಂಗ್ರೆಸ್ ಶಾಸಕರಾಗಿದ್ರು ಅಂತಾ ಹೇಳಿದ್ರು. ಆದ್ರೆ, ತಾವು ರಾಜಕೀಯ ಸೇರುವುದಿಲ್ಲವೆಂದು ಹೇಳುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಆದ್ರೆ, ನಟಿ ಕಂಗನಾಗೆ ಬಿಜೆಪಿ ಬಗ್ಗೆ ಮೃದು ದೋರಣೆ ಇದೆ.




Leave a Reply

Your email address will not be published. Required fields are marked *

error: Content is protected !!