ಭಾರತಕ್ಕೆ ಬಿಗ್ ಟಾರ್ಗೆಟ್ ನೀಡಿದ ಆಸೀಸ್

256

ಪ್ರಜಾಸ್ತ್ರ ಕ್ರೀಡಾಸುದ್ದಿ

ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಟೀಂ ಬಿಗ್ ಟಾರ್ಗೆಟ್ ನೀಡಿದೆ. 312 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಡಿಕ್ಲೇಯರ್ ಮಾಡಿಕೊಂಡಿದೆ. ಈ ಮೂಲಕ ಟೀಂ ಇಂಡಿಯಾ 407 ರನ್ ಗಳ ದೊಡ್ಡ ಗುರಿ ನೀಡಿದೆ.

ಸ್ಮಿತ್ 81, ಗ್ರೀನ್ 83, ಮೊರನ್ಸ್ 73, ಕ್ಯಾಪ್ಟನ್ ಟಿಮ್ 39(ನಾಟೌಟ್) ರನ್ ಗಳಿಂದಾಗಿ ದೊಡ್ಡ ಸ್ಕೋರ್ ಕಲೆ ಹಾಕಿದೆ. ಭಾರತ ಪರ ಅಶ್ವಿನ್ 2, ಸೈನಿ 2, ಸಿರಾಜ್ 1, ಬೂಮ್ರಾ 1 ವಿಕೆಟ್ ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 244 ರನ್ ಗಳಿಗೆ ಆಲೌಟ್ ಆಗಿದ್ದ ಭಾರತಕ್ಕೆ ಇದೀಗ ಗುರಿ ಮುಟ್ಟುವುದು ತುಂಬಾ ಮುಖ್ಯವಾಗಿದೆ.

4ನೇ ದಿನದಾಟದ 3ನೇ ಸೆಸನ್ ನಲ್ಲಿ ಆಡ್ತಿರುವ ಟೀಂ ಇಂಡಿಯಾ 10 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ಶರ್ಮಾ, ಗಿಲ್, ಪೂಜಾರ, ರಹಾನೆ ಮೇಲೆ ಸಾಕಷ್ಟು ಜವಾಬ್ದಾರಿಯಿದೆ. ಉಳಿದಂತೆ ಪಂಥ್, ವಿಹಾರಿ, ಜಡೇಜಾ ಕಮಾಲ್ ಮಾಡಬೇಕಿದೆ.




Leave a Reply

Your email address will not be published. Required fields are marked *

error: Content is protected !!