ಗೆಲುವಿನ ‘ಶಿಖರ’ ಕಟ್ಟಿದ ಹಾರ್ದಿಕ

274

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಆಸೀಸ್ ನೀಡಿದ್ದ 194 ರನ್ ಗಳ ಬಿಗ್ ಸ್ಕೋರ್ ಚೇಜ್ ಮಾಡಿ ಜಯ ಸಾಧಿಸಿದೆ. 19.4 ಓವರ್ ಗಳಲ್ಲಿ 195 ರನ್ ಗಳನ್ನ ಗಳಿಸುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ ಗೆಲುವು ದಾಖಲಿಸಿದೆ.

ಕೆ.ಎಲ್ ರಾಹುಲ 30, ಶಿಖರ ಧವನ್ 52, ಕೊಹ್ಲಿ 40, ಸಂಜು ಸ್ಯಾಮ್ಸನ್ 15, ಹಾರ್ದಿಕ ಪಾಂಡೆ 42, ಶ್ರೇಯಸ ಅಯ್ಯರ್ 12 ರನ್ ಬಾರಿಸಿ ನಾಟೌಟ್ ಆಗಿ ಉಳಿದ್ರು. ಅಂತಿಮವಾಗಿ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ ಗೆಲುವು ಸಾಧಿಸಿತು. ಇನ್ನು ಆಸೀಸ್ ಪರ ಜಂಪಾ, ಡೇನಿಯಲ್,  ಟೈ, ಸ್ವೆಪ್ಸನ್ ತಲಾ 1 ವಿಕೆಟ್ ಪಡೆದ್ರು.

ಇದಕ್ಕೂ ಮೊದ್ಲು ಬ್ಯಾಟ್ ಮಾಡಿದ ಆಸೀಸ್ ಟೀಂ, ವಾಡೆ 58, ಶಾರ್ಟ್ 9, ಸ್ಮಿತ್ 46, ಮ್ಯಾಕ್ಸ್ ವೆಲ್ 22, ಹೆನ್ರಿಕಿಸ್ 26, ಸ್ಟೋನಿಯಸ್ 16, ಡೇನಿಯಲ್ 8 ರನ್ ಗಳಿಸಿ 5 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದ್ರು. ಇಂಡಿಯಾ ಪರ ನಟರಾಜನ್ 2, ಚಾಯಲ್ 1, ಠಾಕೂರ್ 1 ವಿಕೆಟ್ ಪಡೆದು ಮಿಂಚಿದ್ರು.




Leave a Reply

Your email address will not be published. Required fields are marked *

error: Content is protected !!