ಬಾಂಗ್ಲಾ ಉತ್ತಮ ಪ್ರದರ್ಶನ.. ಗೆಲುವಿನ ಸನಿಹದಲ್ಲಿ ಭಾರತ

134

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಹಾಗೂ ಬಾಂಗ್ಲಾದೇಶ ನಡುವೆ 2 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಕೊನೆಯ ಹಂತಕ್ಕೆ ಬಂದಿದೆ. ಭಾರತ ನೀಡಿರುವ 513 ರನ್ ಗಳ ಗುರಿಯನ್ನು ಮುಟ್ಟುವಲ್ಲಿ ಬಾಂಗ್ಲಾ ಪಡೆ ಉತ್ತಮ ಪ್ರದರ್ಶನ ನೀಡುತ್ತಿದೆ. 4ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿದೆ.

ಬಾಂಗ್ಲಾ ಪರ ಝಾಕಿರ್ ಹಸನ್ ಭರ್ಜರಿ ಶತಕ ಸಿಡಿಸಿದರು. ನಜ್ಮುಲ್ 67 ರನ್ ಗಳಿಸಿ ಸಾಥ್ ನೀಡಿದರು. ನಾಯಕ ಶಕೀಬ್ ಅಲ್ ಹಸನ್ 40 ಹಾಗೂ ಮೆಹಿದ್ಯ ಹಸನ್ 9 ರನ್ ಗಳಿಸಿ ಆಡುತ್ತಿದ್ದಾರೆ. ನಾಳೆ 90 ಓವರ್ ಗಳಲ್ಲಿ 241 ರನ್ ಗಳು ಬಾಂಗ್ಲಾಗೆ ಬೇಕು. ಭಾರತಕ್ಕೆ 4 ವಿಕೆಟ್ ಗಳು ಬೇಕು.

ಭಾರತ ಪರ ಅಕ್ಷರ್ ಪಟೇಲ್ ಭರ್ಜರಿ 3 ವಿಕೆಟ್ ಪಡೆದು ಮಿಂಚಿದರು. ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

ಫೋಟೋ ಕೃಪೆ: ಬಿಸಿಸಿಐ ಟ್ವೀಟರ್




Leave a Reply

Your email address will not be published. Required fields are marked *

error: Content is protected !!