ಕೈ ಕೊಟ್ಟ ಅನುಭವಿ ಆಟಗಾರರು.. ಭಾರತ ಗೆಲುವಿಗೆ 100 ರನ್

152

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಢಾಕಾ: ಷೇರ್-ಈ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾ ನಡುವಿನ 2ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಇನ್ನು 100 ರನ್ ಗಳ ಅವಶ್ಯಕತೆ ಇದೆ.

ಮೊದಲ ಇನ್ನಿಂಗ್ಸ್ ನಲ್ಲಿ 227 ರನ್ ಗಳಿಗೆ ಬಾಂಗ್ಲಾ ಆಲ್ ಔಟ್ ಆದರೆ ಭಾರತ 314 ರನ್ ಗಳಿಗೆ ತನ್ನ ಆಟ ಮುಗಿಸಿತು. ಹೀಗಾಗಿ ಕೇವಲ 87 ರನ್ ಗಳ ಮುನ್ನಡೆ ಸಾಧಿಸಿತ್ತು. ಪಂಥ್ 93 ರನ್ ಗಳಿಗೆ ಔಟ್ ಆಗುವ ಮೂಲಕ ಶತಕ ವಂಚಿತನಾದ. ಶ್ರೇಯಸ್ ಅಯ್ಯರ್ 87 ರನ್ ಗಳಿಸಿದ. ಉಳಿದಂತೆ ಅನುಭವಿ ಆಟಗಾರರು ಅಬ್ಬರಿಸಲಿಲ್ಲ.

2ನೇ ಇನ್ನಿಂಗ್ಸ್ ಶುರು ಮಾಡಿದ ಬಾಂಗ್ಲಾ ಪಡೆಯನ್ನು 231 ರನ್ ಗಳಿಗೆ ಭಾರತ ಕಟ್ಟಿ ಹಾಕಿತು. ಅಕ್ಷರ್ ಪಟೇಲ್ 3 ವಿಕೆಟ್ ಉರುಳಿಸಿ ಸಂಭ್ರಮಿಸಿದರು. ಸಿರಾಜ್, ಅಶ್ವಿನ್ ತಲಾ 2 ವಿಕೆಟ್ ಪಡೆದರು. ಉಮೇಶ್ ಯಾದವ್, ಜಯದೇವ್ ಒಂದೊಂದು ವಿಕೆಟ್ ಪಡೆದರು. ಹೀಗಾಗಿ ಕೇವಲ 145 ರನ್ ಟಾರ್ಗೆಟ್ ನೀಡಿತು.

ಈ ಗುರಿ ಬೆನ್ನು ಹತ್ತಿದ ಭಾರತಕ್ಕೆ ಬಾಂಗ್ಲಾ ಆರಂಭಿಕ ಆಘಾತ ನೀಡಿದೆ. ಗಿಲ್ 7, ನಾಯಕ ಕೆ.ಎಲ್ ರಾಹುಲ್ 2, ಪುಜಾರ್ 6, ಕೊಹ್ಲಿ 1 ರನ್ ಗಳಿಗೆ ಔಟ್ ಆಗುವ ಮೂಲಕ 45 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ಅಕ್ಷರ್ ಪಟೇಲ್ 26, ಜಯದೇವ್ ಉನ್ ದಕ್ತ್ 3 ರನ್ ಗಳಿಸಿ ಆಡುತ್ತಿದ್ದಾರೆ. ಭಾರತ ಇನ್ನು 100 ರನ್ ಗಳಿಸಬೇಕು. 2 ದಿನ ಅವಕಾಶವಿದೆ. ಮೊದಲ ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಇದೊಂದು ಗೆದ್ದ 2-0 ಅಂತರದಿಂದ ಟೆಸ್ಟ್ ಸರಣಿ ವಶಪಡಿಸಿಕೊಳ್ಳಬಹುದು.

ಫೋಟೋ ಕೃಪೆ: ಬಿಸಿಸಿಐ ಟ್ವಿಟ್ಟರ್




Leave a Reply

Your email address will not be published. Required fields are marked *

error: Content is protected !!