ಧಾರವಾಹಿ ಸೆಟ್ ನಲ್ಲಿ ಯುವ ನಟಿ ಆತ್ಮಹತ್ಯೆ

218

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹಿಂದಿ ಧಾರವಾಹಿಯ ನಟಿ ತುನಿಶಾ ಶರ್ಮಾ ಶೂಟಿಂಗ್ ಸೆಟ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೇವಲ 20 ವರ್ಷದ ನಟಿ ಶನಿವಾರ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ನಟಿ ಮೃತಪಟ್ಟಿದ್ದಾಳೆ.

ಕೆಲ ದಿನಗಳಿಂದ ತುನಿಶಾ ಸಾಕಷ್ಟು ಆತಂಕದಲ್ಲಿದ್ದಳಂತೆ. ಆದರೆ, ಶನಿವಾರ ಮೇಕಪ್ ರೂಮಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 20 ವರ್ಷದ ನಟಿ ತನ್ನ ಕರಿಯರ್ ಶುರು ಮಾಡಿದ್ದು ಬಾಲನಟಿಯಾಗಿ ‘ಭಾರತ್ ಕಾ ವೀರ್ ಪುತ್ರ- ಮಹಾರಾಣಾ ಪ್ರತಾಪ್ ಶೋ ಮೂಲಕ.

ಚಕ್ರವರ್ತಿ ಅಶೋಕ್ ಸಾಮ್ರಾಟ್, ಗಬ್ಬರ್ ಪೊಂಚವಾಲಾ, ಶೇರ್ ಇ ಪಂಜಾಬ್, ಮಹಾರಾಜ ರಂಜಿತ್ ಸಿಂಗ್, ಇಂಟರ್ ನೆಟ್ ವಾಲಾ ಲವ್, ಇಶ್ಕ್ ಸುಬಾನ್ ಅಲ್ಲಾ, ಅಲಿ ಬಾಬಾ ದಸ್ತಾನ್ ಇ ಕಾಬೂಲ್ ಶೂಗಳಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಗಳಿಸಿದ್ದಳು. ಬಾರ್ ಬಾರ್ ದೇಖೋ, ಕಹಾನಿ-2, ದುರ್ಗಾ ರಾಣಿ ಸಿಂಗ್, ದಬಾಂಗ್-3 ಸೇರಿ ಇತರೆ ಚಿತ್ರಗಳಲ್ಲಿ ನಟಿಸಿದ್ದಾಳೆ. ಈ ಮೂಲಕ ಸಲ್ಮಾನ್ ಖಾನ್, ವಿದ್ಯಾ ಬಾಲನ್, ಕತ್ರೀನಾ ಕೈಫ್, ಸೋನಾಕ್ಷಿ ಸಿನ್ಹಾ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದಳು. ಬಾಲಿವುಡ್ ಅಂಗಳದಲ್ಲಿ ಹಂತ ಹಂತವಾಗಿ ಬೆಳೆಯುತ್ತಿದ್ದ ಯುವ ನಟಿ ಆತ್ಮಹತ್ಯೆಗೆ ಕಾರಣ ತಿಳಿದು ಬರಬೇಕಿದೆ.




Leave a Reply

Your email address will not be published. Required fields are marked *

error: Content is protected !!