337ಕ್ಕೆ ಟೀಂ ಇಂಡಿಯಾ ಆಲೌಟ್

243

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೋಲ್ಕತ್ತಾ: ಇಲ್ಲಿನ ಎಂ.ಎ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 337 ರನ್ ಗಳಿಗೆ ಆಲೌಟ್ ಆಗಿದೆ. ಈ ಮೊಲಕ 241 ರನ್ ಗಳ ಹಿನ್ನಡೆ ಅನುಭವಿಸಿದೆ.

ಇಂಗ್ಲೆಂಡ್ ನೀಡಿದ್ದ 578 ರನ್ ಗಳ ಮೊದಲ ಇನ್ನಿಂಗ್ಸ್ ಗುರಿ ಬೆನ್ನು ಹತ್ತಿದ್ದ ಕೊಹ್ಲಿ ಬಳಗಕ್ಕೆ ರಿಷಬ್ ಪಂತ್ 91, ವಾಸಿಂಗ್ಟನ್ ಸುಂದರ 85 ಹಾಗೂ ಚೇತೇಶ್ವರ ಪೂಜಾರ 73 ರನ್ ಗಳ ಭರ್ಜರಿ ಆಟವಾಡಿದ್ರು. ಆದ್ರೆ, ಉಳಿದವರು ಕ್ರಿಸ್ ನಲ್ಲಿ ನಿಲ್ಲದ ಪರಿಣಾಮ 4ನೇ ದಿನದಾಟದ ಮೊದಲ ವಿರಾಮ ಕಳೆಯುವಷ್ಟರಲ್ಲಿಯೇ ಸರ್ವಪತನ ಕಂಡಿದೆ.

ಡಾಮ್ ಬೆಸ್ 4, ಆ್ಯಂಡ್ರಸನ್, ಆರ್ಚರ್, ಲೀಚ್ ತಲಾ 2 ವಿಕೆಟ್ ಪಡೆದ್ರು. 241 ರನ್ ಗಳ ಮುನ್ನಡೆಯಿಂದಿಗೆ ಆಟ ಮುಂದುವರೆಸಿರುವ ಇಂಗ್ಲೆಂಡ್ 0 ರನ್ ಗೆ 1 ವಿಕೆಟ್ ಕಳೆದುಕೊಂಡಿದೆ. ಸ್ಪೀನ್ನರ್ ಅಶ್ವಿನ್ ಬೆನ್ಸ್ ಔಟ್ ಮಾಡಿದ್ರು.




Leave a Reply

Your email address will not be published. Required fields are marked *

error: Content is protected !!