ಸೂರ್ಯಕುಮಾರ್ ಶತಕ.. ಶ್ರೀಲಂಕಾಗೆ 229 ರನ್ ಟಾರ್ಗೆಟ್

267

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶ್ರೀಲಂಕಾ ವಿರುದ್ಧ 3ನೇ ಹಾಗೂ ಕೊನೆಯ ಟಿ-20 ಪಂದ್ಯದಲ್ಲಿ ಭಾರತದ ಬ್ಯಾಟ್ಸಮನ್ ಗಳು ಅಬ್ಬರಿಸಿದ್ದಾರೆ. ಅದರಲ್ಲೂ ಸೂರ್ಯಕುಮಾರ್ ಯಾದವ್ ಭರ್ಜರಿಯಾಗಿ ಬ್ಯಾಟ್ ಬೀಸಿದ್ದು 51 ಬೌಲ್ ಗಳಲ್ಲಿ ಅಜೇಯ 112 ರನ್ ಗಳಿಸಿದ್ದಾರೆ. ಇದರಲ್ಲಿ 9 ಸಿಕ್ಸ್, 7 ಫೋರ್ ಗಳಿವೆ.

ಶುಭನಂ ಗಿಲ್ 46 ಹಾಗೂ ರಾಹುಲ್ ತ್ರಿಪಾಠಿ 35 ರನ್ ಗಳಿಸಿ ಔಟ್ ಆದರು. ಇಶಾನ್ ಕಿಶಾನ್ 1, ನಾಯಕ ಹಾರ್ದಿಕ್ ಪಾಂಡ್ಯ 4, ದೀಪಕ್ ಹೂಡಾ 4 ರನ್ ಗಳಿಸಿ ನಿರಾಸೆ ಮೂಡಿಸಿದರು. ಅಕ್ಷರ್ ಪಟೇಲ್ 21 ರನ್ ಗಳಿಸಿ ಅಜೇಯನಾಗಿ ಉಳಿದರು.

ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ಲಂಕಾ ಪಡೆಗೆ ಬಿಗ್ ಚಾಲೆಂಜ್ ನೀಡಿದೆ. ಲಂಕಾ ಪರ ಮಧುಶಂಖಾ 2, ಹಸರಂಗ್, ರಜಿತಾ ಹಾಗೂ ಕರುಣಾರತ್ನೆ ತಲಾ ಒಂದೊಂದು ವಿಕೆಟ್ ಪಡೆದರು. 1-1 ಸಮಬಲ ಸಾಧಿಸಿದ್ದು ಈ ಪಂದ್ಯ ಗೆದ್ದವರಿಗೆ ಸರಣಿ ಗೆಲುವು ದೊರೆಯಲಿದೆ.




Leave a Reply

Your email address will not be published. Required fields are marked *

error: Content is protected !!