ಕೊಹ್ಲಿ ಶತಕ.. ಹಲವು ದಿಗ್ಗಜರ ದಾಖಲೆ ಉಡೀಸ್

166

ಪ್ರಜಾಸ್ತ್ರ ಕ್ರೀಡಾ ಸುದ್ದಿ

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 2ನೇ ದಿನದಾಟದ ಅಂತ್ಯಕ್ಕೆ 438ಕ್ಕೆ ಆಲೌಟ್ ಆಗಿದೆ. ವೆಸ್ಟ್ ಇಂಡೀಸ್ 86ಕ್ಕೆ 1 ವಿಕೆಟ್ ಕಳೆದುಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಪರ ಭರ್ಜರಿ ಆಟ ಮೂಡಿ ಬಂದಿತು.

ಐದು ವರ್ಷಗಳ ಬಳಿಕ ಸ್ಫೋಟಕ ಆಟಗಾರ ವಿರಾಟ್ ಕೊಹ್ಲಿ(121) ಶತಕ ಸಿಡಿಸಿದರು. ಇದು ಅವರ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೂಡಿ ಬಂದ 29ನೇ ಟೆಸ್ಟ್ ಒಟ್ಟಿರೆಯಾಗಿ 76ನೇ ಶತಕವಾಗಿದೆ. ಈ ಮೂಲಕ ಹಲವು ದಿಗ್ಗಜರ ದಾಖಲೆ ಉಡೀಸ್ ಮಾಡಿದ್ದಾರೆ. ಸಚಿನ್ ತಂಡೂಲ್ಕರ್ 500 ಪಂದ್ಯಗಳಿಂದ ಗಳಿಸಿದ್ದ 75ನೇ ಶತಕ ದಾಖಲೆ ಸರಿಗಟ್ಟಿದರು.

ಈ ಶತಕದೊಂದಿಗೆ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದ ವಿಶ್ವದ 4ನೇ ಆಟಗಾರನಾದರು. 4ನೇ ಸ್ಥಾನದಲ್ಲಿ ಬಂದು 24 ಶತಕ ಸಿಡಿಸಿದ್ದ ವೆಸ್ಟ್ ಇಂಡೀಸ್ ದೈತ್ಯ ಆಟಗಾರ ಬ್ರಿಯನ್ ಲಾರಾ ದಾಖಲೆ ಸಹ ಮುರಿದು 25ನೇ ಶತಕದೊಂದಿಗೆ ಮುನ್ನುಗಿದ್ದಾರೆ. ಈ ಮೂಲಕ ತಮ್ಮ 500ನೇ ಪಂದ್ಯವನ್ನು ಸ್ಮರಣಿಯವಾಗಿಸಿದರು.

ಇನ್ನು ನಾಯಕ ಶರ್ಮಾ 80, ಆಲ್ ರೌಂಡರ್ ಗಳಾದ ಜಡೇಜಾ 61, ಅಶ್ವಿನ್ 56 ರನ್ ಗಳಿಸಿ ಸಾಥ್ ನೀಡಿದರು. ವಿಂಡೀಸ್ ಪರ ಕೆಮರ್ ರೋಚ್ 3, ಜೊಮಲ್ ವಾರಕಿನ್ 3 ವಿಕೆಟ್ ಪಡೆದು ಮಿಂಚಿದರು. ಹೋಲ್ಡರ್ 2, ಗಬ್ರೇಲ್ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!