27ನೇ ಟೆಸ್ಟ್ ಸೆಂಚುರಿ ಬಾರಿಸಿದ ಕೊಹ್ಲಿ

336

ಕೊಲ್ಕತ್ತಾ: ಇಲ್ಲಿನ ಈಡನ್ ಗಾರ್ಡ್ ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಕ್ಯಾಪ್ಟನ್ ವಿರಾಟ ಕೊಹ್ಲಿ ಶತಕ ಸಾಧನೆ ಮಾಡಿದ್ದಾರೆ. ಇದು ಕೊಹ್ಲಿ ಟೆಸ್ಟ್ ವೃತ್ತಿ ಬದುಕಿನ 27ನೇ ಶತಕವಾಗಿದೆ.

184 ಬೌಲ್ ಗಳನ್ನ ಎದುರಿಸಿರುವ ವಿರಾಟ ಕೊಹ್ಲಿ 125 ರನ್ ಗಳಿಸಿ ಆಡ್ತಿದ್ದಾರೆ. ನಾಯಕನಿಗೆ ಆಲ್ ರೌಂಡರ್ ರವೀಂದ್ರ ಜಡೇಜಾ ಸಾಥ್ ನೀಡಿದ್ದು 11 ರನ್ ಗಳಿಸಿ ಆಡ್ತಿದ್ದಾರೆ. ಚೇತೇಶ್ವರ ಪೂಜಾರ 55, ಅಜಿಂಕೆ ರಹಾನೆ 51 ಗಳಿಸಿ ಔಟ್ ಆದ್ರು. ಮೊದಲ ದಿನವೇ ಆರಂಭಿಕ ಜೋಡಿ ಮಯಾಂಕ ಅಗರ್ವಾಲ್ 14 ಹಾಗೂ ರೋಹಿತ ಶರ್ಮಾ 21 ರನ್ ಬಾರಿಸಿ ಔಟ್ ಆಗಿದ್ರು. ಸದ್ಯ 74 ಓವರ್ ಗಳಲ್ಲಿ 283ಕ್ಕೆ 4 ವಿಕೆಟ್ ಕಳೆದುಕೊಂಡಿದೆ.

ಬಾಂಗ್ಲಾ ಪರ ಇಬ್ದಾತ್ ಹೊಸಿನ್ 2 ವಿಕೆಟ್ ಪಡೆದ್ರೆ ಅಲ್ ಅಮಿನ್ ಹೊಸಿನ್ ಹಾಗೂ ತೈಜುಲ್ ಇಸ್ಲಾಂ ತಲಾ 1 ವಿಕೆಟ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!