ಸಿಸಿಬಿ ಬಲೆಗೆ ಬಿದ್ದ ಡ್ರಗ್ಸ್ ಮಾರಾಟಗಾರ

321

ಬೆಂಗಳೂರು: ಮಾದಕ ವಸ್ತುಗಳನ್ನ ಮಾರಾಟ ಮಾಡ್ತಿದ್ದ ನೈಜೀರಿಯಾ ಮೂಲದ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿದೆ. 40 ವರ್ಷದ ಇಜಿಕಿ ನಿಗ್ವ್ಯೂ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 2 ಲಕ್ಷ ಮೌಲ್ಯದ 1 ಕೆಜಿ ಗಾಂಜಾ, 20 ಗ್ರಾಂ ಕೊಕೈನ್, 2 ಮೊಬೈಲ್, ತೂಕದ ಯಂತ್ರ, ಸಾವಿರ ರೂಪಾಯಿ ಹಾಗೂ ಇತರೆ ವಸ್ತುಗಳನ್ನ ಸಿಸಿಬಿ ಪೊಲೀಸ್ರು ವಶ ಪಡಿಸಿಕೊಂಡಿದ್ದಾರೆ.

ನಗರದ ಬಾಗಲೂರು ವ್ಯಾಪ್ತಿಯ ಕರಗಮ್ಮದೇವಿ ನಿಲಯ 3ನೇ ಮಹಡಿಯಲ್ಲಿ ಈತ ವಾಸವಾಗಿದ್ದ. ಮನೆಯಲ್ಲಿಯೇ ಮಾದಕ ವಸ್ತುಗಳನ್ನ ಇಟ್ಟುಕೊಂಡು ಮಾರಾಟ ಮಾಡ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮನೆಯ ಮೇಲೆ ದಾಳಿ ಮಾಡಿ ಅರೆಸ್ಟ್ ಮಾಡಿದ್ದಾರೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!