ಉಚಿತ ಚಿಕಿತ್ಸೆ ನೀಡುತ್ತಿದ್ದ ಡಾ.ಅಶೋಕ ಸೊನ್ನದ ಕರೋನಾಗೆ ಬಲಿ

345

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಉಚಿತ ಚಿಕಿತ್ಸೆ ನೀಡುವ ಮೂಲಕ ಸಾಕಷ್ಟು ಹೆಸರು ಮಾಡಿದ್ದ ಹಿರಿಯ ವೈದ್ಯ ಡಾ.ಅಶೋಕ ಸೊನ್ನದ(83) ಕರೋನಾ ಸೋಂಕಿನಿಂದ ನಿಧನರಾಗಿದ್ದಾರೆ. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಮುಧೋಳ ತಾಲೂಕಿನ ಬಂಟನೂರ ಗ್ರಾಮಡ ಡಾ.ಅಶೋಕ ಸೊನ್ನದ ಅವರು, 40 ವರ್ಷ ಅಮೆರಿಕಾದಲ್ಲಿ ಸೇವೆ ಸಲ್ಲಿಸಿ ವಾಪಸ್ ಆಗಿದ್ರು. ಜನರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಉಚಿತ ಡಾಕ್ಟರ್ ಎಂದೇ ಖ್ಯಾತಿ ಗಳಿಸಿದ್ರು. ಇವರ ಸೇವೆ ಪರಿಗಣಿಸಿ 2020ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

ಡಾ.ಅಶೋಕ ಸೊನ್ನದ ಅವರ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಅಮೆರಿಕಾದಲ್ಲಿಯೇ ನೆಲೆಸಿದ್ದಾರೆ. ಇವರ ಕುಟುಂಬದಲ್ಲಿ 7 ಜನರು ಪಿಎಚ್.ಡಿ ಪದವೀಧರರಿದ್ದಾರೆ. ಹೀಗಾಗಿ ಡಾಕ್ಟರೇಟ್ ಕುಟುಂಬ ಎಂದು ಗಿನ್ನಿಸ್ ರೆಕಾರ್ಡ್ ಆಗಿದೆ.




Leave a Reply

Your email address will not be published. Required fields are marked *

error: Content is protected !!