ಬೂಮ್ರಾ ಕಮಾಲ್: ಫಾಲೋ ಆನ್ ಸಂಕಷ್ಟದಲ್ಲಿ ಕೆರಿಬಿಯನ್ಸ್

349

ಜಮೈಕಾ: ವೆಸ್ಟ್ ಇಂಡೀಸ್ ಅಂಗಳದಲ್ಲಿ ಬೂಮ್ರಾ ಮತ್ತೊಮ್ಮೆ ಕಮಾಲ್ ಮಾಡಿದ್ದಾನೆ. ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಮಾರಕ ಬೌಲಿಂಗ್ ಮಾಡಿ, ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾನೆ. ಇದರ ಜೊತೆಗೆ ಐತಿಹಾಸಿಕ ದಾಖಲೆ ಮಾಡಿದ್ದಾನೆ.

ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಆದ ಬೂಮ್ರಾ, ಹರ್ಭಜನ್ ಸಿಂಗ್ ಹಾಗೂ ಇರ್ಫಾನ ಪಠಾಣ ಒಳಗೊಂಡಿರುವ ಎಲೈಟ್ ಗ್ರೂಪ್ ಗೆ ಸೇರಿದ್ದಾನೆ. ಈ ಪಂದ್ಯದಲ್ಲಿ ಕೇವಲ 16 ರನ್ ನೀಡಿ ಆರು ವಿಕೆಟ್ ಪಡೆಯುವ ಮೂಲಕ ಕೆರಿಬಿಯನ್ಸ್ ಬೆನ್ನುಮೂಳೆ ಮುರಿದಿದ್ದಾನೆ. ಮೊದಲ ಪಂದ್ಯದಲ್ಲಿ ಐದು ವಿಕೆಟ್ ಪಡೆದಿದ್ದ ಬೂಮ್ರಾ ಈ ಪಂದ್ಯದಲ್ಲಿ 6 ವಿಕೆಟ್ ಪಡೆದು ಮಿಂಚಿದ.

Image result for india vs west indies 2nd test

ಎರಡನೇ ದಿನದಾಟದ ಅಂತ್ಯಕ್ಕೆ 87 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿರುವ ವೆಸ್ಟ್ ಇಂಡೀಸ್ ಫಾಲೋ ಆನ್ ಸಂಕಷ್ಟದಲ್ಲಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಹನುಮಾನ ವಿಹಾರಿ ಶತಕ(111), ನಾಯಕ 76, ಮಯಾಂಕ ಅಗರ್ವಾಲಾ 55, ಇಶಾಂತ ಶರ್ಮಾ 57 ಆಟದ ನೆರವಿನಿಂದ 416 ರನ್ ಗಳಿಗೆ ಆಲೌಟ್ ಆಗಿತ್ತು.




Leave a Reply

Your email address will not be published. Required fields are marked *

error: Content is protected !!