ಭಾರತದ ಜಿಡಿಪಿ ಕುಸಿತ ಎಚ್ಚರಿಕೆ ಗಂಟೆ: ರಾಜನ್

337

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಜೂನ್ ನಲ್ಲಿ ಅಂತ್ಯವಾದ ತ್ರೈಮಾಸಿಕ ಆರ್ಥಿಕ ಬೆಳವಣಿಗೆಯಲ್ಲಿ ಶೇಕಡ 23.9ರಷ್ಟು ಕುಸಿತ ಕಂಡಿರುವುದು ಎಚ್ಚರಿಕೆ ಗಂಟೆಯಾಗಿದೆ ಎಂದು ಆರ್ ಬಿಐ ನಿವೃತ್ತ ಗವರ್ನರ್ ರಘುರಾಮ ರಾಜನ್ ಹೇಳಿದ್ದಾರೆ.

ಈಗಿನ ಆರ್ಥಿಕ ಬಿಕ್ಕಟ್ಟಿನಲ್ಲಿ ಕ್ರಿಯಾಶೀಲ ಹಾಗೂ ಚಲನಶೀಲ ನೀತಿಯ ಅವಶ್ಯಕವಿದೆ. ಹೀಗಾಗಿ ಸರ್ಕಾರ ನಿದ್ದೆಯಿಂದ ಎದ್ದು ಹೊರಬಂದು ಅರ್ಥಪೂರ್ಣವಾದ ಕ್ರಮಗಳನ್ನ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ. ಜಿಡಿಪಿ ಕುಸಿತದಲ್ಲಿ ಸಣ್ಣದಾದ ಬೆಳ್ಳಿಗೆರೆ ಮೂಡಿದರೆ ಆಶಾದಾಯವಾಗಿರಲಿದೆ. ಕೋವಿಡ್ ರೋಗ ದೇಶದಲ್ಲಿ ಉಲ್ಬಣಗೊಳ್ಳುತ್ತಿದೆ. ಹೀಗಾಗಿ ವಿವೇಚನೆಯ ಖರ್ಚು ಮುಖ್ಯ ಎಂದಿದ್ದಾರೆ.

ರೋಗ ನಾಶವಾದಾಗ ರೋಗಿಯು ಕಾಯಿಲೆಯಿಂದ ವೇಗವಾಗಿ ಹೊರ ಬರಲು ಸಾಧ್ಯ. ಆದ್ರೆ, ರೋಗ ಕ್ಷಿಣಿಸುತ್ತಾ ಹೋದರೆ ಹೊರಗಿನ ಪ್ರಭಾವ ಕಡಿಮೆ ಪರಿಣಾಮ ಬೀರುತ್ತೆ. ಅದೆ ರೀತಿ ಆರ್ಥಿಕ ಪರಿಸ್ಥಿತಿಗೂ ಅನ್ವಯವಾಗುತ್ತೆ ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!