ದೇಶದ ಮೊದಲ ಮತದಾರ ನಿಧನ

225

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸ್ವತಂತ್ರ ಭಾರತದ ಮೊದಲ ಮತದಾರ, ಪ್ರಜಾಪ್ರಭುತ್ವದಲ್ಲಿ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದ ಹಿಮಾಚಲ ಪ್ರದೇಶದ ಶ್ಯಾಮ್ ಸರಣ್ ನೇಗಿ(106) ಶನಿವಾರ ನಿಧನರಾಗಿದ್ದಾರೆ. ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.

ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಇವರು ನಿಧನರಾಗುವ ಮುನ್ನ, ಅಂದರೆ ನವೆಂಬರ್ 2ರಂದು ಅಂಚೆ ಮತದಾನ ಮಾಡಿದ್ದಾರೆ. ಇವರು ಲಕ್ಷಾಂತರ ಮತದಾರರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ. ಇತ್ತೀಚೆಗೆ ಇವರ ಮನೆಗೆ ಕಿನ್ನೌರ್ ಜಿಲ್ಲಾಧಿಕಾರಿ ಭೇಟಿ ನೀಡಿದ್ದರು.




Leave a Reply

Your email address will not be published. Required fields are marked *

error: Content is protected !!