ಮುಲ್ಲಾ ನಿಗಮ ಸ್ಥಾಪನೆಗಾಗಿ ಸಿಂದಗಿಯಲ್ಲಿ ಮನವಿ

340

ಪ್ರಜಾಸ್ತ್ರ ಸುದ್ದಿ

ಸಿಂದಗಿ: ರಾಜ್ಯದ 105 ವಿಧಾನಸಭಾ ಮತಕ್ಷೇತ್ರಗಳಲ್ಲಿ ಸುಮಾರು 5 ಸಾವಿರದಿಂದ 8 ಸಾವಿರ ತನಕ ಮುಲ್ಲಾ ಸಮುದಾಯದ ಮತದಾರರು ಇದ್ದಾರೆ. ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿ ಸುಮಾರು 13 ಲಕ್ಷ ಮುಲ್ಲಾ ಜನಸಂಖ್ಯೆ ಇದೆ. ಈ ಸಮುದಾಯ ಹಿಂದುಳಿದ ಸಮುದಾಯವಾಗಿದ್ದು, ಇವರ ಅಭಿವೃದ್ಧಿಗಾಗಿ ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮ  ರಚನೆ ಮಾಡಬೇಕೆಂದು ಶುಕ್ರವಾರ ಮನವಿ ಸಲ್ಲಿಸಲಾಗಿದೆ.

ಕರ್ನಾಟಕ ಮುಲ್ಲಾ ಅಸೋಸಿಯೇಷನ್ ವತಿಯಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಮುಲ್ಲಾ ಅಭಿವೃದ್ಧಿ ನಿಗಮ ರಚನೆ ಜೊತೆಗೆ ಗ್ರಾಮ, ನಗರದಲ್ಲಿ ಮೊಹರಂ ಹಬ್ಬಕ್ಕೆ ಸರ್ಕಾರ ಸಹಾಯಧನ ನೀಡಬೇಕು. ಮೊಹರಂ ಹಬ್ಬದ ರೂವಾರಿಗಳು, ದರ್ಗಾದ ಮುತವಲ್ಲಿ ಅವರಿಗೆ ಮಾಸಿಕ ಪಿಂಚಣಿ ನೀಡಬೇಕು. ಮುಲ್ಲಾ ಸಮುದಾಯವನ್ನು ಕೆಟಗೇರಿ-1ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆಯ ಮನವಿ ಸಲ್ಲಿಸಲಾಯಿತು.

ಈ ವೇಳೆ ಅಸೋಸಿಯೇಷನ್ ತಾಲೂಕಾಧ್ಯಕ್ಷ ಡಾ.ಅಬುಬಕರ್ ಮುಲ್ಲಾ, ಉಪಾಧ್ಯಕ್ಷ ಮುನವರ್ ಹುಸೇನ್ ಮುಲ್ಲಾ, ಇಮ್ತಿಯಾಜ್ ಮುಲ್ಲಾ, ಸಂಚಾಲಕ ಮೊಹಮದ್ ರಫಿಕ್ ಮುಲ್ಲಾ, ನಗರ ಘಟಕದ ಅಧ್ಯಕ್ಷ ಅಬ್ದುಲ್ ಹಕ್ ಮುಲ್ಲಾ, ಕಾರ್ಯದರ್ಶಿ ಶಫೀಕ್ ಮುಲ್ಲಾ, ಅನ್ವರ್ ಮುಲ್ಲಾ, ಕೆ.ಡಿ ಮುಲ್ಲಾ, ಎಸ್.ಎ ಮುಲ್ಲಾ, ಮೊಹಮ್ಮದ್ ಹುಸೇನ್ ಮುಲ್ಲಾ, ಯುಸೂಫ್ ಮುಲ್ಲಾ ಸೇರಿ ಅನೇಕರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!