ವಿಜಯಪುರದ ಐಆರ್ ಬಿ ಕೆಂದ್ರಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ

373

ಪ್ರಜಾಸ್ತ್ರ ಸುದ್ದಿ

ವಿಜಯಪುರ: ನಗರದ ಅರಕೇರಿಯಲ್ಲಿರುವ ಭಾರತೀಯ ಮೀಸಲು ಪಡೆಯ ಕೇಂದ್ರಕ್ಕೆ ಕೆಎಸ್ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದರು. ನಂತರ ಸೆರಮೋನಿಯಲ್ ಪರೇಡ್ ವೀಕ್ಷಿಸಿ ವಂದನೆ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಅವರು, ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ತೂಕ ಇಳಿಸಿಕೊಳ್ಳಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು. ಗೋವಾ ಹಾಗೂ ಉತ್ತರ ಪ್ರದೇಶ ಚುನಾವಣೆಗೆ ಸಜ್ಜರಾಗಬೇಕು ಎಂದು ಸಲಹೆ ನೀಡಿದರು. ಬಳಿಕ ಐಆರ್ ಬಿ ಪಡೆಯ ಬಸ್ಸಿನಲ್ಲಿ ಸಂಚರಿಸಿ, ಆವರಣದಲ್ಲಿ ಸಸಿ ನೆಟ್ಟರು. ಕಮಾಂಡೆಂಟ್ ಎಸ್.ಡಿ ಪಾಟೀಲ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿ ನಿರ್ಮಿಸಿದ ಗಾರ್ಡನ್, ಕ್ರೀಡಾ ಮೈದಾನ, ಮಕ್ಕಳ ಪಾರ್ಕ್, ಬೇಕರಿ, ಮಿಲ್ಕ್ ಪಾರ್ಲರ್ ಉದ್ಘಾಟಿಸಿದರು.

ಐಆರ್ ಬಿ ಸಿಬ್ಬಂದಿ ಶ್ರಮದಾನ ವೀಕ್ಷಿಸಿದ ಎಡಿಜಿಪಿ ಅಲೋಕ್ ಕುಮಾರ್

ಐಆರ್ ಬಿ ಕಮಾಂಡೆಂಟ್ ಎಸ್.ಡಿ ಪಾಟೀಲ ಇದೆ ಜನವರಿ 31ರಂದು ನಿವೃತ್ತಿ ಹೊಂದಲಿದ್ದಾರೆ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆಎಸ್ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ಎಸ್.ರವಿ ಅವರು ಎಸ್.ಡಿ ಪಾಟೀಲ ಅವರ ಕಾರ್ಯವೈಖರಿಯನ್ನು ಹೊಗಳಿಸಿದರು. ಅವರ ನಿವೃತ್ತಿ ಜೀವನ ಸುಖವಾಗಿರಲಿ ಎಂದು ಶುಭ ಕೋರಿದರು.

ಐಆರ್ ಬಿ ಕಮಾಂಡೆಂಟ್ ಎಸ್.ಡಿ ಪಾಟೀಲ ಅವರಿಗೆ ಸನ್ಮಾನ

ಈ ವೇಳೆ ವಿಜಯಪುರ ಎಸ್ಪಿ ಆನಂದ್ ಕುಮಾರ್, ಕಮಾಂಡೆಂಟ್ ಗಳಾದ ರಾಮಕೃಷ್ಣ ಪ್ರಸಾದ್, ಬಸವರಾಜ ಜಿಳ್ಳೆ, ಆರ್.ಜನಾರ್ಧನ್, ಬಿ.ಎಂ ಪ್ರಸಾದ್, ಡಾ.ರಾಮಕೃಷ್ಣ ಮುದ್ದೆಪಾಲ್, ರಮೇಶ್ ಬೋರಗಾಂವಿ, ಹಮ್ಜಾಹುಸೇನ್, ಕೆ.ಎಂ ಮಹಾದೇವ್ ಪ್ರಸಾದ್, ಟಿ.ಸುಂದರಾಜ್, ಬಿ.ಡಿ ಲೋಕೇಶ್, ಎಸ್.ಯುವಕುಮಾರ್, ಐಆರ್ ಬಿ ಅರಕೇರಿ ಕಮಾಂಡೆಂಟ್  ಎಸ್.ಡಿ ಪಾಟೀಲ, ಸಹಾಯಕ ಕಮಾಂಡೆಂಟ್ ಗಳಾದ ಗುರುನಾಥ್ ಎಸ್, ಶರಣಬಸವ್ ನಾಗೇಶ್ ಯಡಗಾಲ್, ಲಕ್ಷ್ಮಣ ಜಿ.ನಾಯ್ಕ್, ಇನ್ಸ್ ಪೆಕ್ಟರ್ ಗಳಾದ ವಿಜಯ ಠಕ್ಕಣ್ಣವರ್, ಮಹಾಂತೇಶ್ ಇಟ್ಟಿ, ಪ್ರಸನ್ ಲಬ್ಬಾ, ಹುಸೇನ್ ಲಾಲಕೋಟಿ, ಕಲ್ಲನಗೌಡ ಪಾಟೀಲ ಸೇರಿದಂತೆ ಇತರೆ ಸಿಬ್ಬಂದಿ ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!