ಜಗತ್ತಿನ ಈ 5 ಸ್ಥಳಗಳಲ್ಲಿ 100ಕ್ಕೂ ಹೆಚ್ಚು ವರ್ಷ ಬದುಕುತ್ತಾರೆ!

176

ಪ್ರಜಾಸ್ತ್ರ ಲೈಫ್ ಸ್ಟೈಲ್

ಇವತ್ತಿನ ಜೀವನ ಪದ್ಧತಿಯಿಂದಾಗಿ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಹೀಗಾಗಿ ಜೀವಿತಾವಧಿ ಕಡಿಮೆಯಾಗುತ್ತಿದೆ. ಹಿಂದೆಲ್ಲ 100, 125 ವರ್ಷಕ್ಕೂ ಹೆಚ್ಚು ಕಾಲ ಬದುಕುತ್ತಿದ್ದರು. ಇದೇ ರೀತಿ ಜಗತ್ತಿನ ಐದು ಸ್ಥಳಗಳಲ್ಲಿ 100ಕ್ಕೂ ಹೆಚ್ಚು ವರ್ಷ ಬದುಕುತ್ತಿದ್ದಾರೆ.

ಗ್ರೀಸ್ ನ ಇಕಾರಿಯಾ ದೀರ್ಘಾಯುಷ್ಯಕ್ಕೆ ಹೆಸರು ಪಡೆದಿದೆ. ಇಲ್ಲಿ ಸರಾಸರಿ 100 ವರ್ಷ ಬದುಕುತ್ತಾರೆ. ಸಾಮಾನ್ಯ ಮನುಷ್ಯನ ಜೀವಿತಾವಧಿಗೂ ಇಲ್ಲಿನವರಿಗೂ ಸಾಕಷ್ಟು ವ್ಯತ್ಯಾಸವಿದೆ. ಇಟಲಿಯ ಸಾರ್ಡಿನಿಯಾದ ಜನರು ಸಹ ದೀರ್ಘಾಯುಷಿಗಳು. ಇವರ ಜೀವನ ಶೈಲಿಯ ಇದಕ್ಕೆ ಕಾರಣವಂತೆ.

ಕ್ಯಾಲಿಫೋರ್ನಿಯಾದ ಲೋಮಾ ಲಿಂಡಾದ ಜನರು, ಕೋಸ್ಟರಿಕಾದ ನಿಕೋಯಾ, ಜಪಾನಿನ ಓಕಿನಾವಾದಲ್ಲಿ ವಾಸಿಸುವ ಜನರು ದೀರ್ಘಾಯುಷಿಗಳಾಗಿದ್ದಾರೆ. ಇದೆಲ್ಲದಕ್ಕೂ ಕಾರಣ ನಿಯಮಿತವಾದ ಜೀವನಶೈಲಿ ಹಾಗೂ ವ್ಯಾಯಾಮ. ಊಟದಲ್ಲಿ ಹೆಚ್ಚೆಚ್ಚು ತರಕಾರಿ, ದ್ವಿದಳ ಧಾನ್ಯಗಳು ಹೆಚ್ಚು ಬಳಸುವುದಾಗಿದೆ.




Leave a Reply

Your email address will not be published. Required fields are marked *

error: Content is protected !!