ವಚನ ಓದು ಮತ್ತು ವಿಶ್ಲೇಷಣೆ ಸ್ಪರ್ಧೆ

733

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಮಡಿವಾಳ ಮಾಚಿದೇವ ವಚನ ಮಂಟಪ ವತಿಯಿಂದ ‘ವಚನ ಓದು ಮತ್ತು ವಿಶ್ಲೇಷಣೆ ಸ್ಪರ್ಧೆ ಆಯೋಜಿಸಲಾಗಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ಈ ಒಂದು ಕಾರ್ಯಕ್ರಮ ಆಯೋಜಿಸಲಾಗ್ತಿದ್ದು, ಇದಕ್ಕಾಗಿ ಸ್ಪರ್ಧೆ ಏರ್ಪಡಿಸಲಾಗಿದೆ.

ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನವರಾದ ಮಡಿವಾಳ ಮಾಚಿದೇವ ಅವರನ್ನ ಸ್ವತಃ ಬಸವಣ್ಣನವರು ಮಾಚಿತಂದೆ ಎಂದು ಕರೆಯುತ್ತಿದ್ದರು. ಮಡಿವಾಳ ಕಾಯಕ ಭಕ್ತಿಯ ಜೊತೆಗೆ ವಚನಗಳನ್ನ ರಚಿಸಿದ್ರು. ಗಣಾಚಾರ ಪರಂಪರೆಯಲ್ಲಿ ಬರುವ ವೀರ ಶರಣರು, ಈ ನಾಡಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಹೀಗಾಗಿ ಅವರನ್ನ ಸ್ಮರಿಸುವ ಮತ್ತು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡಲಾಗ್ತಿದೆ. ಅದರ ಭಾಗವಾಗಿ ‘ವಚನ ಓದು ಮತ್ತು ವಿಶ್ಲೇಷಣೆ ಸ್ಪರ್ಧೆ ಆಯೋಜಿಸಲಾಗಿದೆ.

ಸ್ಪರ್ಧೆಯ ನಿಯಮಗಳು:

ಸ್ಪರ್ಧೆಯಲ್ಲಿ ಭಾಗವಹಿಸುವವರು ವಿಜಯಪುರ ಜಿಲ್ಲೆಯವರಾಗಿರಬೇಕು

ಕಂಠಪಾಠದಂತೆ ಹೇಳಬಾರದು

ಸರ್ಕಾರ ಪ್ರಕಟಿಸಿರುವ ಜನಪ್ರಿಯ ವಚನ ಸಂಪುಟದಲ್ಲಿನ ಮಡಿವಾಳ ಮಾಚಿದೇವ ಅವರ ವಚನ ಆಗಿರಬೇಕು

12-15 ನಿಮಿಷದೊಳಗೆ ವಚನವನ್ನ ವಿಶ್ಲೇಷಣೆ ಮಾಡಬೇಕು

ವಿಡಿಯೋ ಕಳುಹಿಸುವ ಕೊನೆಯ ದಿನಾಂಕ ಸೆಪ್ಟೆಂಬರ್ 30, 2020 ಆಗಿರುತ್ತೆ

ವಚನದ ವಿಡಿಯೋಗಳನ್ನ ಈ ನಂಬರ್ ಗಳಿಗೆ (9901195557, 9035397009, 9980406033) ಕಳುಹಿಸಬೇಕು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 20 ಸಾವಿರ, ದ್ವಿತೀಯ ಸ್ಥಾನ ಬಂದವರಿಗೆ 10 ಸಾವಿರ ಹಾಗೂ ತೃತೀಯ ಸ್ಥಾನ ಬಂದವರಿಗೆ 5 ಸಾವಿರ ರೂಪಾಯಿ ನೀಡಲಾಗುವುದು ಎಂದು ಅಧ್ಯಕ್ಷರಾದ ಮಡಿವಾಳಪ್ಪ ಕರದಾಳಿ, ಕಾರ್ಯದರ್ಶಿ ನಾಗೇಶ ತಳವಾರ ಹಾಗೂ ಖಜಾಂಚಿ ಗುರುರಾಜ ಪಡಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!