ಸಂಸತ್ತಿನಲ್ಲಿ ಇನ್ನು ಮುಂದೆ ಈ ಪದಗಳನ್ನು ಬಳಸುವಂತಿಲ್ಲ..

299

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಜುಲೈ 18ರಿಂದ ಲೋಕಸಭೆಯಲ್ಲಿ ಮುಂಗಾರು ಅಧಿವೇಶನ ನಡೆಯಲಿದೆ. ಹೀಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದರ ನಡುವೆ ಇಂದು ಲೋಕಸಭೆ ಕಾರ್ಯದರ್ಶಿ ಹೊರಡಿಸಿರುವ ಹೊಸ ಕೈಪಿಡಿ ರಾಜಕೀಯ ನಾಯಕರಿಗೆ ಸವಾಲಾಗಿದೆ. ಯಾಕಂದರೆ, ಈ ಕೈಪಿಡಿಯಲ್ಲಿ ಬರೋಬ್ಬರಿ 100ಕ್ಕೂ ಹೆಚ್ಚು ಪದಗಳನ್ನು ಅಸಂಸದೀಯ ಪದಗಳೆಂದು ಪಟ್ಟಿ ಮಾಡಿ, ಅವುಗಳನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಉಚ್ಛರಿಸಬಾರದು ಎಂದು ತಿಳಿಸಲಾಗಿದೆ.

ಸರ್ಕಾರವನ್ನು, ಪ್ರಧಾನಿಯನ್ನು, ಸಚಿವರನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಪದಗಳಲ್ಲಿಯೇ ದಾಳಿ ನಡೆಸುತ್ತಿದ್ದರು. ಅದೆ ರೀತಿ ಆಡಳಿತ ಪಕ್ಷದವರು ಸಹ ವಿಪಕ್ಷಗಳ ಮೇಲೆ ಮುಗಿಬೀಳುತ್ತಿದ್ದರು. ಇದೀಗ ಬಿಡುಗಡೆ ಮಾಡಿರುವ ಕೈಪಿಡಿಯಲ್ಲಿ ಈ ಪದಗಳಿದ್ದು, ಅಧಿವೇಶನದ ವೇಳೆ ಇವುಗಳನ್ನು ಬಳಸುವಂತಿಲ್ಲವೆಂದು ತಿಳಿಸಲಾಗಿದೆ.

ಅಸಮರ್ಥ, ದ್ರೋಹ ಬಗೆದ, ಬಾಲಬುದ್ಧಿ, ನಾಟಕ, ಕಿವುಡ ಸರ್ಕಾರ, ತಮಟೆ ಬಾರಿಸುವುದು, ಕೋವಿಡ್ ಸ್ಪ್ರೆಡರ್, ಅರಾಜಕತಾವಾದಿ, ಚಮಚಾಗಿರಿ, ಚೇಲಾಗಳು, ಬಾಲಿಶ, ಹೇಡಿ, ಅಪರಾಧಿ, ಮೊಸಳೆ ಕಣ್ಣೀರು, ವಿನಾಶ್ ಪುರುಷ್, ಲೈಂಗಿಕ ಕಿರುಕುಳ, ನಾಚಿಕೆಗೇಡು, ಬೂಟಾಟಿಕೆ, ಭ್ರಷ್ಟ, ರಕ್ತಪಾತ, ಕ್ರೂರಿ, ದ್ರೋಹ ಬಗೆದ, ನಾಚಿಕೆಗೇಡು, ನಿಂದಿಸಿದ, ಮೋಸಮಾಡಿದ, ಅವಮಾನ, ಕತ್ತೆ, ಕಣ್ಣೊರೆಸು ಪದಗಳನ್ನು ಈ ಕೈಪಿಡಿಯಲ್ಲಿ ಸೇರಿಸಲಾಗಿದೆ.

ಸರ್ವಾಧಿಕಾರಿ, ಖಲಿಸ್ತಾನಿ, ರಕ್ತದಿಂದ ಕೃಷಿ, ಡಬಲ್ ರೋಲ್, ಕೆಲಸಕ್ಕೆ ಬಾರದವ,
ಶಕುನಿ, ವಿನಾಶ ಪುರುಷ್, ಅರಾಜಕತಾವಾದಿ ಹೀಗೆ ಅನೇಕ ಶಬ್ದಗಳೂ ಪಟ್ಟಿಯಲ್ಲಿ ಇವೆ.

ಹಿಂದಿ ಮತ್ತು ಇಂಗ್ಲಿಷ್​ ಪದಗಳ ಬಗ್ಗೆ ಹೇಳುವುದಾದರೆ:

ಜುಮ್ಲಾಜೀವಿ, ಗಧಾರ್, ಅಹಂಕಾರ್, ಕಲಾ ದಿನ್, ಕಲಾ ಬಜಾರಿ, ದಂಗಾ, ದಾದಾಗಿರಿ, ದೋಹ್ರ ಚರಿತ್ರಾ, ಬೇಚಾರ, ಬಾಬ್‌ಕಟ್, ಲಾಲಿ ಪಾಪ್, ವಿಶ್ವಾಸಘಾತ್​, ಚಮಚಾಗಿರಿ, ಚೇಲಾಸ್, ಸಂವೇದನಾಹೀನ್, ಮೂರ್ಖ್​, ಬ್ಲಡ್‌ಶೆಡ್, ಬ್ಲಡಿ, ಬಿಟ್ರೇಯ್ಡ್, ಅಶೇಮ್ಡ್, ಅಬ್ಯೂಸ್ಡ್, ಚೀಟೆಡ್, ಚಮ್ಚ, ಬಿಕೇರಿ ಸರ್ಕಾರ್, ಹಿಪೋಕ್ರಸಿ, ಇನ್‌ಕಾಂಪಿಟೆಂಟ್, ಚೈಲ್ಡಿನೆಸ್, ಕರಪ್ಟ್, ಕವರ್ಡ್, ಕ್ರಿಮಿನಲ್, ಕ್ರೊಕೊಡೈಲ್ ಟಿಯರ್ಸ್, ಡಿಸ್‌ಗ್ರೇಸ್, ಡಾಂಕಿ, ಡ್ರಾಮಾ, ಐವಾಶ್, ಮಿಸ್ಲೀಡ್, ಲೈ, ಅನ್‌ಟ್ರೂ ಫಡ್ಜ್, ಹೂಲಿಗಾನಿಸಂ ಮುಂತಾದವುಗಳ ಪಟ್ಟಿ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!