ಕೋವಿಡ್ 19: ಕಲಬುರಗಿಗೆ ವಿಜಯಪುರದ ನಂಟು!

371

ವಿಜಯಪುರ/ಕಲಬುರಗಿ: ಇಂದು ಮುಂಜಾನೆ ಬಂದ ಹೆಲ್ತ್ ಬುಲೆಟಿನ್ ನಲ್ಲಿ 7 ಹೊಸ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 4 ತಿಂಗಳ ಗಂಡು ಮಗು ಸೇರಿದಂತೆ ಐವರಲ್ಲಿ ಸೋಂಕು ಕಂಡು ಬಂದಿರುವುದು ಕಲಬುರಗಿಯಲ್ಲಿ. ಈ ಐವರಲ್ಲಿ ಇಬ್ಬರಿಗೆ ಸೋಂಕು ತಗುಲಿರುವುದು ವಿಜಯಪುರದ ಸೋಂಕಿತರಿಂದ ಅನ್ನೋದು ತಿಳಿದು ಬಂದಿದೆ.

ಯೆಸ್, 35 ವರ್ಷದ ಮಹಿಳೆ ಹಾಗೂ 4 ತಿಂಗಳ ಮಗುವಿಗೆ ಪೆಸೆಂಟ್ ನಂಬರ್ 329 ಸಂಪರ್ಕದಿಂದ ಬಂದಿದೆ ಎಂದು ವರದಿಯಲ್ಲಿದೆ. ಈ 329 ಪೆಸೆಂಟ್ ಇರುವುದು ವಿಜಯಪುರದಲ್ಲಿ. ಅದು ಕೇವಲ 6 ವರ್ಷದ ಗಂಡು ಮಗುವಿದೆ. ಈ ಮಗುವಿಗೆ ಸೋಂಕು ತಗುಲಿರುವುದು 221 ಪೆಸೆಂಟ್ ನಿಂದ. ಅಂದ್ರೆ, ವಿಜಯಪುರದಲ್ಲಿ ಏಪ್ರಿಲ್ 12 ರಂದು ಮೊದಲು ಪತ್ತೆಯಾದ 60 ವರ್ಷದ ವೃದ್ಧೆಯಲ್ಲಿ ಕಾಣಿಸಿಕೊಂಡ ಪ್ರಕರಣವಿದು. ಆಕೆಯೇ ಪೆಸೆಂಟ್ ನಂಬರ್ 221. ಹೀಗಾಗಿ 6 ವರ್ಷದ ಮಗುವಿನಿಂದ ಇವರಿಗೆ ಹೇಗೆ ಬಂತು ಅನ್ನೋ ಅನುಮಾನ ಬಂದಿದೆ.

ಇದೆಲ್ಲವನ್ನ ಗಮನಿಸ್ತಾ ಹೋದಂತೆ ಮೇಲ್ನೋಟಕ್ಕೆ ಒಂದೇ ಕುಟುಂಬದ ಸುತ್ತ ಸುತ್ತಿಕೊಂಡಿರುವಂತೆ ಕಾಣ್ತಿದೆ. ಇದು ಎಷ್ಟು ನಿಜ ಅನ್ನೋದು ಗೊತ್ತಿಲ್ಲ. ಕಲಬುರಗಿಯ 35 ವರ್ಷದ ಪೆಸೆಂಟ್ ನಂಬರ್ 423 ಮಹಿಳೆ ವಿಜಯಪುರಕ್ಕೆ ಬಂದು ಹೋಗಿದ್ದಳಾ? ಅಥವ ವಿಜಯಪುರದ 6 ವರ್ಷದ 329 ಕೇಸಿನ ಮಗು ಕಲಬುರಗಿಗೆ ಬಂದು ಹೋಗಿತ್ತಾ? ಬಂದಿದ್ರೆ ಯಾರು ಜೊತೆಗೆ? ಅನ್ನೋ ಪಶ್ನೆ ಮೂಡಿದೆ. ಈ ಮೂಲಕ ಜನರಲ್ಲಿ ಸಾಕಷ್ಟು ಆತಂಕ ಮೂಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಬೇಕಿದೆ. ಇವರು ನೀಡುವ ವರದಿ ಮೇಲೆ ಏನು ಅನ್ನೋದು ಸ್ಪಷ್ಟವಾಗಲಿದೆ.




Leave a Reply

Your email address will not be published. Required fields are marked *

error: Content is protected !!