ಕರೋನಾ ಶವಯಾತ್ರೆ

322

ಪಾಂಡವಪುರ: ಮಹಾಮಾರಿ ಕರೋನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಪುರಸಭೆ ಅಧಿಕಾರಿಗಳು, ಬುಧವಾರ ಕರೋನಾ ಶವಯಾತ್ರೆ ನಡೆಸಿದ್ರು. ಈ ಮೂಲಕ ಸಾರ್ವಜನಿಕರಲ್ಲಿನ ಭಯ ಹೋಗಲಾಡಿಸುವ ಪ್ರಯತ್ನ ನಡೆಸಿದರು.

ಪುರಸಭೆ ಕಚೇರಿ ಆವರಣದಿಂದ ಬೆಳಿಗ್ಗೆ 12 ಗಂಟೆಗೆ ಪ್ರಾರಂಭವಾದ ಶವಯಾತ್ರೆ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿತು. ಕರೋನಾ ಸೋಂಕು ತಡೆಗಟ್ಟಲು ಯಾರೂ ಮನೆಯಿಂದ ಹೊರಗೆ ಬರಬಾರದು. ಬಂದರೆ‌ ಸೋಂಕು ತಗಲುವ ಸಾಧ್ಯತೆಗಳಿವೆ. ಸಾರ್ವಜನಿಕರು ತಾಲೂಕು ಆಡಳಿತದ ಜತೆ ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಮನವಿ ಮಾಡಿದರು.

ಈ ವೇಳೆ ಕಂದಾಯ ಅಧಿಕಾರಿ ಪಳನಿ, ಇಂಜಿನಿಯರ್ ಚೌಡಪ್ಪ, ಆರೋಗ್ಯ ನಿರೀಕ್ಷಿಕ ಕಾಳಪ್ಪ, ಬಸವರಾಜು, ರಮೇಶ, ಚಿಂತಾಮಣಿ ಮುಂತಾದವರು ಇದ್ದರು.




Leave a Reply

Your email address will not be published. Required fields are marked *

error: Content is protected !!