‘ಮಾಹಿ’ಗಾಗಿ ವಿಶೇಷ ವಿಡಿಯೋ ರಿಲೀಸ್ ಮಾಡಿದ ಬಿಸಿಸಿಐ

769

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ನಾಯಕರಲ್ಲಿ ಎಂ.ಎಸ್ ಧೋನಿ ಸಹ ಒಬ್ಬರು. ಅವರು ಆಗಸ್ಟ್ 15ರಂದು ನಿವೃತ್ತಿ ಘೋಷಣೆ ಮಾಡುವ ಮೂಲಕ, ಕೋಟ್ಯಾಂತರ ಅಭಿಮಾನಿಗಳಿಗೆ ಶಾಕ್ ನೀಡಿದ್ರು. 38ರ ಹರೆಯದ ಧೋನಿ, ಬಗ್ಗೆ ಇಡೀ ಜಗತ್ತು ಮೆಚ್ಚುಗೆ ವ್ಯಕ್ತಪಡಿಸಿದೆ. ಅವರ ಫ್ಯಾನ್ಸ್, ಕ್ರೀಡಾ ತಾರೆಯರು, ಸಿನಿ ತಾರೆಯರು, ರಾಜಕೀಯ ನಾಯಕರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದೀಗ ಬಿಸಿಸಿಐ ಮಾಹಿಗಾಗಿ ವಿಶೇಷ ವಿಡಿಯೋ ಮಾಡಿ ಬಿಡುಗಡೆ ಮಾಡಿದೆ. ಈ ಮೂಲಕ ಇಂಡಿಯನ್ ಬೆಸ್ಟ್ ಆ್ಯಂಡ್ ಕೂಲ್ ಕ್ಯಾಪ್ಟನ್ ಆಗಿದ್ದ ಧೋನಿಗೆ ಅರ್ಪಣೆ ಮಾಡಿದೆ. ಈಗಿನ ಕ್ಯಾಪ್ಟನ್ ವಿರಾಟ ಕೊಹ್ಲಿ, ಕೋಚ್ ರವಿ ಶಾಸ್ತ್ರಿ, ರೋಹಿತ ಶರ್ಮಾ, ಬೂಮ್ರಾ, ಕನ್ನಡಿಗ ಕೆ.ಎಲ್ ರಾಹುಲ, ಇಶಾಂತ ಶರ್ಮಾ, ಚಾಹಲ್ ಸೇರಿ ಅನೇಕರು ಧೋನಿ ಜೊತೆಗಿನ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ವಿಡಿಯೋ ಲಿಂಕ್ ಇಲ್ಲಿದೆ ನೋಡಿ..

https://bcci.tv/videos/147358/thank-you-ms-dhoni




Leave a Reply

Your email address will not be published. Required fields are marked *

error: Content is protected !!