ನಿವಾರ್ ಚಂಡಮಾರುತ: ಚೆನ್ನೈನಲ್ಲಿ ಅದೆಷ್ಟು ಸಾವು ನೋವು?

265

ಪ್ರಜಾಸ್ತ್ರ ಸುದ್ದಿ

ಚೆನ್ನೈ: ನಿವಾರ್ ಚಂಡಮಾರುತ ದಕ್ಷಿಣ ಭಾರತ ರಾಜ್ಯಗಳ ಮೇಲೆ ತನ್ನ ರುದ್ರನರ್ತನ ತೋರಿಸ್ತಿದೆ. ಬುಧವಾರ ತಡರಾತ್ರಿ ಕಡಲೂರು ಜಿಲ್ಲೆಯ ಕರಾವಳಿ ಹಾಗೂ ಪುದಚೇರಿ ಭಾಗದಲ್ಲಿ ಭಾರಿ ಮಳೆಯಾಗಿದೆ. ಇದ್ರಿಂದಾಗಿ ಸಾಕಷ್ಟು ಅನಾಹುತ ಸಂಭವಿಸಿವೆ.

ಚೆನ್ನೈನಲ್ಲಿ ಈಗಾಗ್ಲೇ 80ಕ್ಕೂ ಮರಗಳು ಧರೆಗುರುಳಿವೆ. 5 ಮಂದಿ ಸಾವನ್ನಪ್ಪಿದ್ದಾರೆ. ಪೂರ್ವ ಆಗ್ನೇಯ ಪ್ರದೇಶದಲ್ಲಿ 120-130 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸ್ತಿದೆ. ಅಲ್ದೇ, ತಮಿಳುನಾಡು, ಆಂಧ್ರ, ಪುದುಚೇರಿ ಭಾರಿ ಮಳೆಯಾಗ್ತಿದೆ. ಇದ್ರಿಂದಾಗಿ ಸಾವು ನೋವು ಸಂಭವಿಸಿದೆ ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತದ ಹಿನ್ನೆಲೆಯಲ್ಲಿ ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ. ಜನರ ರಕ್ಷಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ 1,200 ಸಿಬ್ಬಂದಿ ನೇಮಿಸಲಾಗಿದ್ದು, ಹೆಚ್ಚುವರಿಯಾಗಿ 800 ಸಿಬ್ಬಂದಿ ರೆಡಿಯಾಗಿದ್ದಾರೆ. ನಿವಾರ್ ಎಫೆಕ್ಟ್ ಕರ್ನಾಟಕದ ಮೇಲೆ ಏನಾಗುತ್ತೆ ಅನ್ನೋ ಆತಂಕ ಎದುರಾಗಿದೆ.




Leave a Reply

Your email address will not be published. Required fields are marked *

error: Content is protected !!