ಹಿರಿಯ ಸಾಹಿತಿ ನಾ.ಡಿಸೋಜಾಗೆ ಪಂಪ ಪ್ರಶಸ್ತಿ

225

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ವಿವಿಧ ಸಾಹಿತ್ಯ ಮತ್ತು ನಾಟಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಿರಿಯ ಸಾಹಿತಿ ಶಿವಮೊಗ್ಗದ ನಾ.ಡಿಸೋಜಾ ಅವರಿಗೆ 2023-24ನೇ ಸಾಲಿನ ಪಂಪ ಪ್ರಶಸ್ತಿ ಘೋಷಿಸಲಾಗಿದೆ.

2022-23ನೇ ಸಾಲಿನ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಹಾಸನದ ಬಾನು ಮುಸ್ತಾಕ್, 2023-24ನೇ ಸಾಲಿಗೆ ರಾಯಚೂರಿನ ಎಚ್.ಎಸ್ ಮುಕ್ತಾಯಕ್ಕ, ಪ್ರೊ.ಕೆ.ಜಿ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ 2022-23ರ ಸಾಲಿನಲ್ಲಿ ಮಹಾರಾಷ್ಟ್ರದ ಡಾ.ಕೆ.ವಿಶ್ವನಾಥ್ ಕಾರ್ನಾಡ, 2023-24ನೇ ಸಾಲಿನಲ್ಲಿ ಬೆಳಗಾವಿಯ ಚಂದ್ರಕಾಂತ ಪೊಕಳೆ ಆಯ್ಕೆ ಆಗಿದ್ದಾರೆ.

ಬಿ.ವಿ ಕಾರಂತ ಪ್ರಶಸ್ತಿಗೆ 2022-23ನೇ ಸಾಲಿನಲ್ಲಿ ಸಿ.ಬಸವಲಿಂಗಯ್ಯ, 2023-24ನೇ ಸಾಲಿನಲ್ಲಿ ಮಂಗಳೂರಿನ ಸದಾನಂದ ಸುವರ್ಣ, ಡಾ.ಗುಬ್ಬಿ ವೀರಣ್ಣ ಪ್ರಶಸ್ತಿಗೆ 2022-23ರ ಸಾಲಿನಲ್ಲಿ ತುಮಕೂರಿನ ಚನ್ನಬಸಯ್ಯ ಗುಬ್ಬಿ, 2023-24ನೇ ಸಾಲಿನಲ್ಲಿ ವಿಜಯಪುರದ ಎಲ್.ಬಿ ಶೇಖ್ ಮಾಸ್ತಾರ್ ಹಾಗೂ ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗೆ 2021-22ನೇ ಸಾಲಿನಲ್ಲಿ ಡಾ.ಮೊಗಳ್ಳಿ ಗಣೇಶ್, 2022-23ನೇ ಉತ್ತಮ ಕಾಂಬ್ಳೆ, 2023-24ನೇ ಸಾಲಿನಲ್ಲಿ ದಾವಣಗೆರೆಯ ಬಿ.ಟಿ ಜಾಹ್ನವಿ ಆಯ್ಕೆ ಆಗಿದ್ದಾರೆ.

ಈ ಎಲ್ಲ ಪ್ರಶಸ್ತಿಯು ತಲಾ 5 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿರುತ್ತೆ. ಡಾ.ಬರಗೂರು ರಾಮಚಂದ್ರಪ್ಪ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು. ಇದರ ಜೊತೆಗೆ ಸಾಂಸ್ಕೃತಿಕ, ಕಲಾ ವಿಭಾಗದಲ್ಲಿಯೂ ವಿವಿಧ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!