ರೌಡಿ ಶೀಟರ್ ಗಳ ಪರೇಡ್

444

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ರೌಡಿ ಶೀಟರ್ ಗಳ ಪರೇಡ್ ಶನಿವಾರ ನಡೆಸಲಾಯಿತು. ಒಟ್ಟು 112 ರೌಡಿ ಶೀಟರ್ ಗಳಲ್ಲಿ ಕೇವಲ 39 ಜನರು ಮಾತ್ರ ಹಾಜರಾಗಿದ್ದರು. ಉಳಿದವರು ಗೈರಾಗಿದ್ದರು. ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, ಕೋಮು ಸೌಹಾರ್ದತೆಗೆ ಧಕ್ಕೆ ತಂದ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳ ರೌಡಿ ಶೀಟರ್ ಗಳ ಪರೇಡ್ ನ್ನು ಸಿಪಿಐ ರವಿ ಉಕ್ಕಂದ ನಡೆಸಿದರು.

ತಾಲೂಕಿನಲ್ಲಿ ಮತ್ತೆ ಏನಾದರೂ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾದರೆ ಸರಿಯಾಗಿ ಪಾಠ ಕಲಿಸಬೇಕಾಗುತ್ತೆ. ಕೋರ್ಟ್ ಗೆ ಸರಿಯಾದ ಸಮಯಕ್ಕೆ ಹಾಜರಾಗಬೇಕು. ಎಲ್ಲ ಅಕ್ರಮ ಚಟುವಟಿಕೆಗಳಿಂದ ದೂರು ಇರಬೇಕು. ನಿಮ್ಮೆಲ್ಲರ ಮೇಲೆ ನಿಗಾ ಇಡಲಾಗಿದೆ ಎಂದು ಎಚ್ಚರಿಕೆ ನೀಡಿದರು. ಇಂದು ಹಾಜರಾಗದೆ ಇರುವವರಿಗೆ ಬೇರೆ ರೀತಿ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದರು. ಈ ವೇಳೆ ಪಿಎಸ್ಐ ನಿಂಗಪ್ಪ ಪೂಜಾರಿ ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!