ಕಲ್ಯಾಣ ಕರ್ನಾಟಕಕ್ಕೆ ಮೋದಿ.. ಬಸ್ ಸಮಸ್ಯೆಗೆ ಜನರು ಹೈರಾಣು

171

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಪ್ರಧಾನಿ ಮೋದಿ ಯಾದಗಿರಿಯ ಕೊಡೇಕಲ್, ಕಲಬುರಗಿಯ ಸೇಡಂನಲ್ಲಿ ಹಲವು ಯೋಜನೆಗಳ ಉದ್ಘಾಟನೆ ನಿಮಿತ್ತ ಆಗಮಿಸಿದ್ದಾರೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಕಾರ್ಯಕರ್ತರನ್ನು, ಜನರನ್ನು ಕರೆದುಕೊಂಡು ಹೋಗಲು ಬಸ್ ಗಳನ್ನು ತೆಗೆದುಕೊಂಡು ಹೋಗಲಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ಘಟಕದಿಂದ 150 ಬಸ್ ಗಳನ್ನು ಮುಳಖೇಡಗೆ ಕಳುಹಿಸಿಕೊಡಲಾಗಿದೆ. ಕಲಬುರಗಿ ಘಟಕ, ಯಾದಗಿರಿ ಘಟಕ, ವಿಜಯಪುರ ಘಟಕದಿಂದಲೂ ಬಸ್ ಗಳನ್ನು ಬಿಡಲಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಸಹ ತಿಳಿಸಿದ್ದಾರೆ. ಹೀಗಾಗಿ ಒಪ್ಪಂದದ ಮೇರೆಗೆ ಬಸ್ ಗಳನ್ನು ಬಿಡಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸಾರಿಗೆ ಸಮಸ್ಯೆಯಾಗಿದೆ.

52 ಸಾವಿರಕ್ಕೂ ಹೆಚ್ಚು ತಾಂಡಾ ನಿವಾಸಿಗಳನ್ನು ಮುಳಖೇಡಕ್ಕೆ ಕರೆದುಕೊಂಡು ಹೋಗಲಾಗಿದೆ. ಹೀಗಾಗಿ ಈ ಭಾಗದ ಅಧಿಕಾರಿಗಳನ್ನು, ಸಿಬ್ಬಂದಿಯನ್ನು ಇದಕ್ಕೆ ಬಳಸಿಕೊಳ್ಳಲಾಗಿದೆ. ಹೀಗಾಗಿ ಈ ಭಾಗದ ಸಾರಿಗೆ ವಾಹನಗಳನ್ನು ತೆಗೆದುಕೊಂಡು ಹೋಗಲಾಗಿದೆ. ಇದರ ಪರಿಣಾಮ ಜನರ ಮೇಲೆ ಆಗಿದೆ.




Leave a Reply

Your email address will not be published. Required fields are marked *

error: Content is protected !!