ಮೋದಿ ಡಬ್ಲುಹೆಚ್ಓ ಅಧ್ಯಕ್ಷರೆಂದು ಜೈಕಾರ.. ಅಸಲಿ ಕಥೆಯೇನು?

1278

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗ್ತಿದೆ. ಇದನ್ನ ನಿಜವೆಂದು ನಂಬಿರುವ ಅವರ ಫ್ಯಾನ್ಸ್, ಹಿಂದುಮುಂದು ನೋಡದೆ ಮೋದಿಗೆ ಜೈಕಾರ ಹಾಕ್ತಿದ್ದಾರೆ.

ಅಸಲಿಗೆ ಡಬ್ಲುಹೆಚ್ಓಗೆ ಇರೋದು ಪ್ರಧಾನ ನಿರ್ದೇಶಕರು ಹಾಗೂ ಇಬ್ಬರು ಉಪ ನಿರ್ದೇಶಕರು. ಇದಕ್ಕೆ ಅಧ್ಯಕ್ಷರ ಹುದ್ದೆ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳ ಸದಸ್ಯರು ಸೇರಿ ವಿಶ್ವ ಆರೋಗ್ಯ ಸದನವಿದೆ. ಈ ಸದನದಲ್ಲಿನ ಸದಸ್ಯರು ಇವರನ್ನ ಆಯ್ಕೆ ಮಾಡ್ತಾರೆ. ಇವರ ಅವಧಿ ಐದು ವರ್ಷ ಇರುತ್ತೆ.

ಹೀಗಿರುವಾಗ ಒಂದು ದೇಶದ ಪ್ರಧಾನಿಯನ್ನ ಅಂತಾರಾಷ್ಟ್ರೀಯ ಸಂಸ್ಥೆಯ ಮುಖ್ಯಸ್ಥನ ಸ್ಥಾನ ಕೊಡಲು ಬರುತ್ತಾ? ಅದನ್ನ ಅವರು ನಿರ್ವಹಣೆ ಮಾಡಲು ಆಗುತ್ತಾ? ಇದು ಸಾಧ್ಯವೇ ಅನ್ನೋದರ ಬಗ್ಗೆ ಯಾವುದನ್ನು ತಿಳಿದುಕೊಳ್ಳದೆ, ಸೋಷಿಯಲ್ ಮೀಡಿಯಾದಲ್ಲಿ ಮೋದಿ ಡಬ್ಲುಹೆಚ್ಓ ಅಧ್ಯಕ್ಷರಾಗಿದ್ದಾರೆ. ವಿಶ್ವಗುರುವಾಗಿದ್ದಾರೆ. ಅದು ಇದು ಎಂದು ಅವರ ಅಭಿಮಾನಿಗಳು ಜೈಕಾರ ಹಾಕ್ತಿದ್ದಾರೆ. ಹೀಗೆ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಜನರಲ್ಲಿ ಸುಖಾಸುಮ್ಮನೆ ಗೊಂದಲ ಸೃಷ್ಟಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!