ಪ್ರಜಾಸ್ತ್ರ ‘ಬುಕ್ ಸ್ಟೋರ್’ನಲ್ಲಿ…

444

ಬರಹ, ಕಾವ್ಯ, ನಾಟಕ, ವಿಮರ್ಶೆ ಸೇರಿದಂತೆ ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಯುವ ಬರಹಗಾರರ ಹೊಸ ಕೃತಿಗಳ ಕಿರು ಮಾಹಿತಿ ಪ್ರಜಾಸ್ತ್ರ ‘ಬುಕ್ ಸ್ಟೋರ್’ನಲ್ಲಿ…

ಡಾ.ಜಿ.ಎಸ್ ಭೂಸಗೊಂಡ ವೃತ್ತಿಯಿಂದ ಚಿತ್ರಕಲಾ ಶಿಕ್ಷಕರು. ತಮ್ಮ ಕಲೆಯ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದವರು. ಶ್ರೀಯುತರಿಗೆ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವಿದೆ.

‘ಕೋಟ್ಯಾಳಕರ ಅವರ ರೇಖಾಚಿತ್ರಗಳು ಮತ್ತು ಚಂದ್ರವರ್ಮ ಬಿ.ಆರ್ ಕೋಟ್ಯಾಳಕರ’ ಅವರ ಸಂಶೋಧನಾ ಮಹಾಪ್ರಬಂಧಕ್ಕೆ ಡಿ.ಲಿಟ್ ಪದವಿ ಪಡೆದಿದ್ದಾರೆ. ಇದರ ಜೊತೆಗೆ ಯೋಗ ಕಲೆಯಲ್ಲಿ ಅಪಾರ ಸಾಧನೆ ಮಾಡಿರುವ ಡಾ.ಜಿ.ಎಸ್ ಭೂಸಗೊಂಡ ಅವರು ರಚಿಸಿದ ‘ದೃಶ್ಯಕಲಾ ಸಾಹಿತ್ಯ ಸಮಾಲೋಚನೆ’ ಅನ್ನೋ 12 ಲೇಖನಗಳ ಕೃತಿ ಅಕ್ಟೋಬರ್ 13ರಂದು ಲೋಕಾರ್ಪಣೆಗೊಂಡಿದೆ.

ಆಶಾ ಭೂಸಗೊಂಡ ಅವರು ರಚಿಸಿದ ಚೊಚ್ಚಲ ಕೃತಿ ‘ಭಾವಭಿತ್ತಿ’ ಕವನ ಸಂಕಲನ ಅಕ್ಟೋಬರ್ 13ರಂದು ಬಿಡುಗಡೆಯಾಗಿದೆ. ಎಂಸಿಎ ಪದವಿ ಪಡೆದಿರುವ ಆಶಾ ಅವರ ಮೊದಲ ಕವನ ಸಂಕಲನದಲ್ಲಿ 49 ಕವಿತೆಗಳಿವೆ. ಪ್ರಥಮ ಕೃತಿಯಲ್ಲಿಯೇ ಭರವಸೆ ಮೂಡಿಸಿದ್ದಾರೆ.

‘ದೃಶ್ಯಕಲಾ ಸಾಹಿತ್ಯ ಸಮಾಲೋಚನೆ’ ಕೃತಿಗಾಗಿ ರಾಷ್ಟ್ರೀಯ ದೃಶ್ಯಕಲಾ ಅಕಾಡಮಿ, ಧಾರವಾಡ ಹಾಗೂ ‘ಭಾವಭಿತ್ತಿ’ ಕೃತಿಗಾಗಿ ಚಂದ್ರವರ್ಮಾ ಪ್ರಕಾಶನ, ತಿಕೋಟಾ ಇವರಲ್ಲಿ ಸಂಪರ್ಕಿಸಬಹುದು. ಮೊಬೈಲ್ ನಂಬರ್– 944976662/9972612828




Leave a Reply

Your email address will not be published. Required fields are marked *

error: Content is protected !!