ರಾಯಚೂರು ಕಿಡ್ನಾಪ್ ಕೇಸ್: ಸಿಂದಗಿಯಲ್ಲಿ ಐವರು ಅರೆಸ್ಟ್

585

ಸಿಂದಗಿ: ಕಳೆದ ನವೆಂಬರ್ 16ರಂದು ರಾಯಚೂರ ಜಿಲ್ಲೆಯ ಲಿಂಗಸೂರಿನ ಹೊಸ ಬಸ್ ನಿಲ್ದಾಣದ ಬಳಿ, ಸಿನ್ಮಾ ಸ್ಟೈಲಿನಲ್ಲಿ ಸಾರ್ವಜನಿಕರನ್ನು ಭಯಪಡಿಸಿ, ವ್ಯಕ್ತಿಯೊಬ್ಬನನ್ನ ಕಿಡ್ನಾಪ್ ಮಾಡಲಾಗಿತ್ತು. ಈ ಪ್ರಕರಣ ಹಿನ್ನಲೆಯಲ್ಲಿ ಸಿಂದಗಿ ತಾಲೂಕಿನ ಐವರನ್ನ ಅಪಹರಣಕಾರರನ್ನ ಅರೆಸ್ಟ್ ಮಾಡಲಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದೂರಲದಿನ್ನಿ ತಾಂಡಾದ 22 ವರ್ಷದ ಶರಣಪ್ಪ ಸೋನಪ್ಪ ಚೌವ್ಹಾಣ ಎಂಬಾತನನ್ನು ಅಪಹರಣ ಮಾಡಲಾಗಿತ್ತು.

ಚಾಂದಕವಠೆ ಗ್ರಾಮದ 30 ವರ್ಷದ ಚಾಂದಸಾಬ ಇಸ್ಮಾಯಿಲ್ಸಾಬ್ ಮುಲ್ಲಾ, ಸೋಂಪೂರ ಗ್ರಾಮದ 25 ವರ್ಷದ ರಮೇಶ ಶಿವಣ್ಣ ಯಡ್ರಾಮಿ, ಸಿಂದಗಿ ಪಟ್ಟಣದ ಕಂಠೆಪ್ಪ ಲೇಔಟ್ ನಿವಾಸಿ 24 ವರ್ಷದ ಮಿರಾಜ್ ಬಾಷಾಸಾಬ್ ಬಾಗವಾನ ಹಾಗೂ ಹಳೇ ಬಜಾರಿನ ನಿವಾಸಿ 21 ವರ್ಷದ ಸಂತೋಷ ಚಂದಾನವರ, 28 ವರ್ಷದ ಶಬ್ಬೀರ ಇಸ್ಮಾಯಿಲಸಾಬ ಅನ್ನೋ ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ. ರಾಯಚೂರು ಪೊಲೀಸ್ರು, ಸ್ಥಳೀಯ ಪೊಲೀಸರ ಸಹಾಯದಿಂದ ಕಾರ್ಯಾಚರಣೆ ನಡೆಸಿ ನಾಲ್ವರನ್ನ ಬಂಧಿಸಿದ್ದಾರೆ.

ಘಟನೆ ಹಿನ್ನಲೆ:

ಸಿಂದಗಿ ತಾಲೂಕಿನ ಚಾಂದಕವಠೆಯ ಚಾಂದಸಾಬ ಇಸ್ಮಾಯಿಲ್ ಮುಲ್ಲಾ ಎಂಬಾತ ಅಪಹರಣಕ್ಕೊಳಗಾದ ಶರಣಪ್ಪನಿಗೆ ಕಬ್ಬು ಕಟಾವ್ ಮಾಡಲು ಲೇಬರ್ ತರಲು ಹಣ ನೀಡಿದ್ದ. ಆದರೆ ಶರಣಪ್ಪ ಹಣ ತೆಗೆದುಕೊಂಡು, ಟೋಳಿ ತರದ ಕಾರಣ ಫೋನಿನಲ್ಲಿ ಸಾಕಷ್ಟು ಬಾರಿ ಮಾತಿನ ಚಕಮಕಿಯಾಗಿತ್ತು. ಫೋನಿನಲ್ಲಿ ಮಾತನಾಡುವ ಶರಣಪ್ಪ ಮುಖಾಮುಖಿಯಾಗಿ ಸಿಕ್ಕಿರಲಿಲ್ಲ ಎಂದು ಹೇಳಲಾಗುತ್ತಿದೆ. ಆತನಿಗಾಗಿ ಹುಡುಕಾಟ ಶುರು ಮಾಡಿದ್ದ ಆರೋಪಿಗಳು ನವೆಂಬರ್ 16ರಂದು ಶನಿವಾರ ಮಧ್ಯಾಹ್ನದ ವೇಳೆ, ಲಿಂಗಸೂರಿನಲ್ಲಿದ್ದ ಮಾಹಿತಿಯಂತೆ ನಾಲ್ವರ ತಂಡದೊಂದಿಗೆ ಚಾಂದಸಾಬ ತನಗೆ ಸೇರಿದ (MH 16 BC 3566 ) ಕಾರಿನಲ್ಲಿ ಹೋಗಿ ಶರಣಪ್ಪನನ್ನು ಭೇಟಿ ಮಾಡಿ, ಕೆಲಕಾಲ ಆತನೊಂದಿಗೆ ಮಿತವಾದ ಮಾತಿನ ಚಕಮಕಿ ನಡೆಸಿದ್ದಾರೆ.

ಬಳಿಕ ಏಕಾಏಕಿ ಆತನನ್ನು ಎಳೆದು ಕಾರಿನಲ್ಲಿ ಕೂರಿಸುವ ಯತ್ನ ಮಾಡಿದಾಗ ಗಾಬರಿಗೊಂಡ ಶರಣಪ್ಪನನ್ನ  ಬಚಾವ್ ಮಾಡಲು ಸಾರ್ವಜನಿಕರು, ಕಾರನ್ನ ಅಡ್ಡಗಟ್ಟುವ ಯತ್ನ ಮಾಡಿದ್ದಾರೆ. ಆದರೆ ಅಪಹರಣಕಾರರು ಸ್ಟೀಲ್ ಪೈಪ್ನಿಂದ ಶರಣಪ್ಪನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ತಮ್ಮ ಬಳಿ ಇದ್ದ ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸಾರ್ವಜನಿಕರಿಗೆ ಬೆದರಿಕೆ ಹಾಕಿ ಅಪಹರಿಸಿದ್ದರು.

ಈ ಕಿಡ್ನಾಪ್ ದೃಶ್ಯ ಪಕ್ಕದ ಅಂಗಡಿಯ ಸಿಸಿ ರಸ್ತೆಯಲ್ಲಿ ದಾಖಲಾಗಿತ್ತು. ಅಲ್ಲದೇ ಈ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿಯೂ ಹೆಚ್ಚು ವೀಕ್ಷಣೆಗೊಳಗಾಗಿತ್ತು. ಈ ಹಿನ್ನಲೆ ರಾಯಚೂರ ಎಸ್ಪಿ ಕಾರ್ನಂಬರ ಹಾಗೂ ಅಪಹರಣಕಾರರ ಬಗ್ಗೆ ಸಾರ್ವಜನಿಕ ಮಾಹಿತಿಗಾಗಿ ಸಂದೇಶಗಳನ್ನು ಕಳುಹಿಸಿ, ಶರಣಪ್ಪನ ತಾಯಿ ನೀಡಿದ ದೂರಿನನ್ವಯ ತನಿಖೆ ಶುರು ಮಾಡಿದ್ರು. ಅದರಂತೆ ಭಾನುವಾರ ತಾಲೂಕಿನ ಚಾಂದಕವಠೆ ಗ್ರಾಮದಲ್ಲಿದ್ದ ಚಾಂದಸಾಬ ಹಾಗೂ ರಮೇಶ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಸಿಂದಗಿ ಪಟ್ಟಣದಲ್ಲಿ ಮಿರಾಜ್ ಹಾಗೂ ಸಂತೋಷನನ್ನ ಬಂಧಿಸಿ ಕರೆದೊಕೊಂಡು ಹೋಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!