ಸಿಂದಗಿಯಲ್ಲಿ ಭೂಕಂಪನ: ಎದ್ನೋ ಬಿದ್ನೋ ಎಂದು ಓಡಿದ ಗ್ರಾಮಸ್ಥರು

378

ಸಿಂದಗಿ: ತಾಲೂಕಿನ ದೇವಣಗಾಂವ, ಸೊನ್ನ, ಅಫ್ಜಲಪುರ, ಆಲಮೇಲ, ಕುಮಸಗಿ, ಬಮ್ಮನಳ್ಳಿ, ಕಡ್ಲೇವಾಡ, ಶಂಬೇವಾಡ, ಮೊರಟಗಿ ಗ್ರಾಮ ಸೇರಿದಂತೆ ಸುತ್ತಮುತ್ತ ಭಾಗದಲ್ಲಿ ಭೂಕಂಪನದ ಅನುಭವ ಆಗಿದೆ. ಇದ್ರಿಂದ ಬೆಚ್ಚಿಬಿದ್ದ ಜನರು, ಎದ್ನೋ ಬಿದ್ನೋ ಎಂದು ಮನೆಯಿಂದ ಹೊರ ಬಂದಿದ್ದಾರೆ.

ಭಾರೀ ಪ್ರಮಾಣದಲ್ಲಿ ಸ್ಫೋಟಕ ರೀತಿಯ ಸದ್ದು ಕೇಳಿ ಬಂದಿದೆ. ಹೀಗಾಗಿ ಗ್ರಾಮಸ್ಥರು, ಬೈಕ್ ತೆಗೆದುಕೊಂಡು ಸುತ್ತಲಿನ ಹೊಲಗಳಲ್ಲಿ ಹುಡುಕಾಟ ನಡೆಸಿದ್ರು. ಸುಮಾರು 10.30ಕ್ಕೆ ಭೂಕಂಪನದ ಅನುಭವ ಆಗಿದ್ದು, ಸಿಂದಗಿ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ನಲ್ಲಿಯೂ ಇದರ ಸಣ್ಣ ಪ್ರಮಾಣದ ಅನುಭವ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರು ಸಹ ಕೆಲಕಾಲ ಬೆಚ್ಚಿ ಬಿದ್ದಿದ್ರು. ಇನ್ನು ಬ್ಯಾಂಕ್ ಪಕ್ಕದಲ್ಲಿರುವ ಝರಾಕ್ಸ್ ಅಂಗಡಿಯ ಮಾಲೀಕನಿಗೂ ಇದರ ಅನುಭವ ಆಗಿದೆ.

ಇನ್ನು ಕೆಲವರು ಭಾರೀ ಪ್ರಮಾಣದಲ್ಲಿ ಸದ್ದು ಕೇಳಿದೆ ಅಂತಾ ಹೇಳ್ತಿದ್ದಾರೆ. ಹೀಗಾಗಿ ಇದು ಭೂಕಂಪನವೋ.. ಎಲ್ಲೋ ನಡೆದ ಸ್ಫೋಟಕದ ಅನುಭವೋ ಏನು ಅನ್ನೋದು ಅಸ್ಪಷ್ಟತೆಯಿದೆ. ಹೀಗಾಗಿ ತಾಲೂಕಿನ ಜನ ಬೆಚ್ಚಿಬಿದ್ದಿದ್ದಾರೆ.




Leave a Reply

Your email address will not be published. Required fields are marked *

error: Content is protected !!