ಕೊನೆ ಹಂತದಲ್ಲಿ ಮತ್ತೆ ಯಡವತ್ತಿರುವ ಆರ್ ಸಿಬಿ

269

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 120 ಸಾಧಾರಣ ರನ್ ಕಲೆ ಹಾಕಿದೆ. ಈ ಮೂಲಕ ಕೊನೆ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಮತ್ತೆ ಯಡವತ್ತಿದೆ.

ಹಿಂದಿನ 2 ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಆರ್ ಸಿಬಿ ಪ್ಲೇ ಆಫ್ ಗೆ ಹೋಗಲು ಈ ಪಂದ್ಯ ನಿರ್ಣಾಯಕವಾಗಿದೆ. ಆದ್ರೆ, ಸನ್ ರೈಜರ್ಸ್ ಹೈದ್ರಾಬಾದ್ ಎದುರು ಕೇವಲ 120 ರನ್ ಗಳಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ವಾರ್ನರ್ ಟೀಂ ಭರ್ಜರಿ ಬೌಲಿಂಗ್ ಮಾಡಿದೆ.

ಜೋಶ್ ಫಿಲಪ್ 32, ಪಡಿಕಲ್ 5, ಕೊಹ್ಲಿ 7, ಎಬಿಡಿ 24, ವಾಸಿಂಗ್ಟನ್ ಸುಂದರ್ 21, ಗುರ್ ಕೀರ್ತ್ ಸಿಂಗ್ 15, ಉದಾನ್ 0, ಸಿರಾಜ್ 2 ರನ್ ಬಾರಿಸಿದ್ರು. ಎಸ್ಆರ್ ಎಚ್ ಪರ ಸಂದೀಪ ಶರ್ಮಾ 2, ಹೊಲ್ಡರ್ 2 ವಿಕೆಟ್ ಪಡೆದ್ರೆ ನಟರಾಜನ್, ನದೀಮ್, ರಶೀದ್ ಖಾನ್ ತಲಾ 1 ವಿಕೆಟ್ ಪಡೆದ್ರು.


TAG


Leave a Reply

Your email address will not be published. Required fields are marked *

error: Content is protected !!