ಟಾಲಿವುಡ್ ವಿರುದ್ಧ ಸಿಡಿದೆದ್ದ ಡಿ ಬಾಸ್

438

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಡಿ ಬಾಸ್ ನಟ ದರ್ಶನ ಟಾಲಿವುಡ್ ವಿರುದ್ಧ ಸಿಡಿದೆದ್ದಾರೆ. ಕಾರಣ, ಅವರ ಬಹುನಿರೀಕ್ಷಿತ ರಾಬರ್ಟ್ ಚಿತ್ರವನ್ನ ಆಂಧ್ರದಲ್ಲಿ ರಿಲೀಸ್ ಮಾಡಲು ತಕರಾರು ಶುರುವಾಗಿದೆ. ಇದಕ್ಕೆ ಡಿ ಬಾಸ್ ಕಿಡಿ ಕಾರಿದ್ದಾರೆ. ಕನ್ನಡ ಹಾಗೂ ತೆಲುಗು ಅವತರಣಿಕೆ ಏಕಕಾಲದಲ್ಲಿ ರಿಲೀಸ್ ಆಗ್ತಿರುವುಕ್ಕೆ ಅಡ್ಡಿ ಪಡಿಸಲಾಗ್ತಿದೆ.

ಮಾರ್ಚ್ 11ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಅಂದು ಶಿವರಾತ್ರಿ ಪ್ರಯುಕ್ತ ಮೂರು ನಾಲ್ಕು ತೆಲುಗು ಚಿತ್ರಗಳು ರಿಲೀಸ್ ಆಗುತ್ತಿವೆ. ಹೀಗಾಗಿ ರಾಬರ್ಟ್ ಸಿನಿಮಾ ರಿಲೀಸ್ ಗೆ ಅವಕಾಶ ನೀಡ್ತಿಲ್ಲ. ಈ ಬಗ್ಗೆ ದರ್ಶನ ಕಿಡಿ ಕಾರಿದ್ದಾರೆ. ಅನ್ಯ ಭಾಷೆಯ ಸಿನಿಮಾಗಳು ಆಯಾ ರಾಜ್ಯಗಳಲ್ಲಿ ರಿಲೀಸ್ ಆದ ನಾಲ್ಕು ವಾರಗಳ ನಂತರ ನಮ್ಮಲ್ಲಿ ಬಿಡುಗಡೆಯಾಗಬೇಕು. ಆದ್ರೆ, ಆ ನಿಯಮ ಪಾಲನೆ ಆಗುತ್ತಿಲ್ಲ.

ಇದೀಗ ನಮ್ಮ ಚಿತ್ರಗಳ ಬಿಡುಗಡೆಗೆ ನಾನಾ ಕಾರಣಗಳನ್ನ ನೀಡ್ತಿದ್ದು ಈ ಬಗ್ಗೆ ವಾಣಿಜ್ಯ ಮಂಡಳಿಗೆ ದೂರು ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಕರ್ನಾಟಕ ಹಾಗೂ ಆಂಧ್ರದಲ್ಲಿ ಸಂಚಲನ ಮೂಡಿದ್ದು, ಮುಂದೇನಾಗುತ್ತೆ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!