ಸಹ ಆಟಗಾರರ ನಿಂದನೆ: ಕ್ಷಮೆ ಕೇಳಿದ ಮಾರ್ಕ್ ಬೌಷರ್

224

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಜೊಹಾನ್ಸ್ ಬರ್ಗ್: ಸೌಥ್ ಆಫ್ರಿಕಾದ ಮಾಜಿ ಆಟಗಾರ ಹಾಗೂ ಹಾಲಿ ಕೋಚ್, ಸಹ ಆಟಗಾರರನ್ನು ನಿಂದಿಸುವ ರೀತಿಯಲ್ಲಿ ಹಾಗೂ ಅವರ ಅಡ್ಡ ಹೆಸರುಗಳನ್ನ ಗೇಲಿ ಮಾಡುವ ರೀತಿಯಲ್ಲಿ ಹಾಡು ಬರೆದ್ದಿದ್ರು. ಇದನ್ನ ಹಲವು ಆಟಗಾರರು ಟೀಕಿಸಿದ್ರು. ಇದೀಗ ಮಾರ್ಕ್ ಬೌಷರ್ ಕ್ಷಮೆ ಕೇಳಿದ್ದಾರೆ.

ತಂಡದಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ನಡೆದ ಘಟನೆ ಸಂಬಂಧ ಪಾಲ್ ಆಯಡಮ್ಸ್ ಮುಂದಾಳತ್ವದ ಅನೇಕ ಆಟಗಾರರು ವರ್ಣಬೇಧ ನೀತಿಯನ್ನ ಅನುಸರಿಸುತ್ತಿದ್ದಾರೆ ಎಂದು ದೂರು ನೀಡಿದ್ರು. ಇದೀಗ ಬೌಷರ್, 14 ಪುಟಗಳ ಅಫಿಡವಿಟ್ ನ್ನ ಕ್ರಿಕೆಟ್ ಸೌಥ್ ಆಫ್ರಿಕಾ ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರ ನಿರ್ಮಾಣ ಸಂಸ್ಥೆಗೆ ಸಲ್ಲಿಸಿದ್ದಾರೆ.

ನಾನು ಮತ್ತು ತಂಡದ ಆಟಗಾರರು ಸೂಕ್ಷ್ಮವಾಗಿರಬೇಕಿತ್ತು. ಆದ್ರೆ, ನನ್ನಿಂದ ಏನಾದರೂ ತಪ್ಪಾಗಿದ್ರೆ ಕ್ಷಮಿಸಿ ಎಂದು ಮಾರ್ಕ್ ಬೌಷರ್ ಕೇಳಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!