ಸೈನಾ ವಿರುದ್ಧ ‘ಜ್ವಾಲಾ’ಮುಖಿ

415

ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ನಿನ್ನೆ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಇದು ಅನೇಕರಿಗೆ ಶಾಕ್ ನೀಡಿತ್ತು. ಸೈನಾ ತಮ್ಮ ಸಹೋದರಿ ಚಂದ್ರಂಶು ಜೊತೆ ಬಿಜೆಪಿ ಸೇರಿಕೊಂಡಿದ್ದಾರೆ. ಇದರ ಪರ ವಿರೋಧದ ನಡುವೆ ಮತ್ತೊಬ್ಬಳು ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಸೈನಾ ವಿರುದ್ಧ ಕಿಡಿ ಕಾರಿದ್ದಾರೆ.

ಇದೇ ಮೊದಲ ಬಾರಿಗೆ ಕೇಳುತ್ತಿದ್ದೇನೆ. ಕಾರಣವಿಲ್ಲದೆ ಆಟವನ್ನ ಶುರು ಮಾಡಿದ್ರು. ಈಗ ಕಾರಣವಿಲ್ಲದೆ ಪಕ್ಷೊಂದು ಸೇರ್ಪಡೆಯಾಗಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಬರೆಯುವ ಮೂಲಕ ಸೈನಾ ವಿರುದ್ಧ ಜ್ವಾಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವು ನೆಟ್ಟಿಗರು ಸೈನಾ ಪರ ಬ್ಯಾಟ್ ಬೀಸಿದ್ದು ಪದಕಗಳಿಂದಲೇ ತುಂಬಿಕೊಂಡಿರುವ ಅವರ ವೃತ್ತಿ ಬದುಕಿನ ಬಗ್ಗೆ ಟೀಕಿಸಲು ಕಾರಣವೇ ಇಲ್ಲವೆಂದು ಜ್ವಾಲಾ ಕಾಲೆಳದಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಆಟಗಾರ್ತಿಯರ ಪರ ವಿರೋಧದ ಚರ್ಚೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!