ಬ್ಯಾಡ್ಮಿಂಟನ್ ಕೋಚ್ ಗುಟ್ಟು ಬಿಚ್ಚಿಟ್ಟ ಗುಟ್ಟಾ

484

ಪ್ರಜಾಸ್ತ್ರ ಸುದ್ದಿ

ಬ್ಯಾಡ್ಮಿಂಟನ್ ಕೋಚ್ ಪುಲೇಲ ಗೋಪಿಚಂದ ವಿರುದ್ಧ ಮಾಜಿ ಡಬಲ್ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಮಾಧ್ಯಮದವರ ಎದುರು ಕೆಲ ಗುಟ್ಟುಗಳನ್ನ ಬಿಚ್ಚಿಟ್ಟಿದ್ದಾರೆ.

ಗೋಪಿಚಂದ ಬ್ಯಾಂಡ್ಮಿಟನ್ ನಲ್ಲಿ ಭಾರತವನ್ನ ಪ್ರತಿನಿಧಿಸ್ತಿದ್ದಾಗ ಬೇರೆ ಬೇರೆ ರಾಜ್ಯದವರು ಸಹ ಇರ್ತಿದ್ರು. ಆದ್ರೆ, ಕೋಚ್ ಆದ್ಮೇಲೆ ಹೈದ್ರಾಬಾದ್ ಅಥವ ತೆಲುಗಿನ ಆಟಗಾರರನ್ನೇ ಹೆಚ್ಚಾಗಿ ನೋಡಬಹುದಾಗಿದೆ. ಅದು ಒಂದು ನಿರ್ದಿಷ್ಟ ಅಕಾಡೆಮಿ ಅವರೆ ಭಾರತದಲ್ಲಿ ಸ್ಥಾನ ಪಡೆಯುತ್ತಿದ್ದಾರೆ ಎಂದಿದ್ದಾರೆ.

ಆಂತರಿಕ ರಾಜಕೀಯದಿಂದಾಗಿ ವಿದೇಶಿ ಕೋಚ್ ಗಳು ಅಧಿಕರಾವಧಿ ಪೂರ್ಣಗೊಳಿಸದೆ ಹೋಗಿದ್ದಾರೆ. ಇದಕ್ಕೆ ನಾನು ಸಾಕ್ಷಿಯಾಗಿದ್ದೇನೆ ಎಂದಿರುವ ಗುಟ್ಟಾ, ಪದಕ ಬಂದ್ರೆ ಗೋಪಿಚಂದ ಕೋಚ್ ಕಾರಣ. ಕಳಪೆ ಆಟವಾಡಿದ್ರೆ ವ್ಯವಸ್ಥೆ ಸರಿಯಿಲ್ಲ ಅನ್ನೋದು. ಇನ್ನು ನಾನು ಅನುಭವಿಸಿರುವ ಕಿರುಕುಳಕ್ಕೆ ಗೋಪಿಚಂದ ಕಾರಣವೆಂದು ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಆರೋಪಿಸಿದ್ದಾರೆ. ಈ ಮೂಲಕ ಬೇರೆ ಬೇರೆ ರಾಜ್ಯಗಳ ಪ್ರತಿಭೆಗಳಿಗೆ ಅವಕಾಶ ಸಿಗ್ತಿಲ್ಲವೆಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!