‘ಸಲಗ’ ಟೀಂಗೆ ಶಿವಣ್ಣ ಸಾಥ್

472

ದುನಿಯಾ ವಿಜಿ ನಿರ್ದೇಶನ ಹಾಗೂ ನಟನೆಯ ಸಲಗ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಾಥ್ ನೀಡಿದ್ದಾರೆ. ಜನವರಿ 5ರಂದು ಸಲಗ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗ್ತಿದೆ. ಇದನ್ನ ಶಿವಣ್ಣ ರಿಲೀಸ್ ಮಾಡ್ತಿದ್ದಾರೆ.

ಎ2 ಯೂಟ್ಯೂಬ್ ಚಾನಲ್ ನಲ್ಲಿ ಶಿವಣ್ಣ ಸಾಂಗ್ ರಿಲೀಸ್ ಮಾಡ್ತಿದ್ದು ದುನಿಯಾ ವಿಜಿ ಹಾಗೂ ಶಿವಣ್ಣನ ಅಭಿಮಾನಿಗಳಿಗೆ ಖುಷಿಯ ಸಂಗತಿಯಾಗಿದೆ. ಅಲ್ದೇ, ಸಲಗ ಟೀಂಗೆ ಶುಭ ಕೋರಿದ್ದು ಟೀಂಗೆ ಮತ್ತಷ್ಟು ಜೋಶ್ ಬಂದಿದೆ.

ದುನಿಯಾ ವಿಜಿ ನಿರ್ದೇಶನದ ಮೊದಲ ಚಿತ್ರವನ್ನ ಕೆ.ಪಿ ಶ್ರೀಕಾಂತ ನಿರ್ಮಾಣ ಮಾಡ್ತಿದ್ದಾರೆ. ನಟ ದುನಿಯಾ ವಿಜಿ, ಡಾಲಿ ಧನಂಜಯ, ಸಂಜನಾ ಆನಂದ, ಕಾಕ್ರೋಚ್ ಖ್ಯಾತಿಯ ಸುಧಿ ಮೇನ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!