ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕರೋನಾ ಲಾಕ್ ಡೌನ್ ಸಡಿಲಿಕೆ ಬಳಿಕ ಚಿತ್ರರಂಗಕ್ಕೂ ಒಂದಿಷ್ಟು ಮಾರ್ಗಸೂಚನೆಗಳನ್ನ ನೀಡಲಾಗಿದೆ. ಅದರಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಅಲ್ದೇ, ಶೂಟಿಂಗ್ ಟೈಂನಲ್ಲಿ ಕಡಿಮೆ ಕಾರ್ಮಿಕರನ್ನ ಬಳಸಿಕೊಂಡು ಸಾಮಾಜಿಕ ಅಂತರದೊಂದಿಗೆ ಕೆಲಸ ಮಾಡಲು ಸೂಚಿಸಲಾಗಿದೆ.
ಹೀಗಾಗಿ ಪ್ರಭುದೇವ ಆ್ಯಕ್ಷನ್ ಕಟ್ ಹೇಳ್ತಿರುವ ‘ರಾಧೆ: ಯುವರ್ ಮೋಸ್ಟ್ ವಾಟೆಂಡ್ ಭಾಯಿ’ ಅನ್ನೋ ಸಿನಿಮಾ ಶೂಟಿಂಗ್ ಶುರುವಾಗಲಿದೆಯಂತೆ. ಈಗಾಗ್ಲೇ ಸುಮಾರು ಶೇಕಡ 70ರಷ್ಟು ಶೂಟಿಂಗ್ ಮುಗಿದಿದೆ. ಲಾಕ್ ಡೌನ್ ನಿಂದಾಗಿ ಎಲ್ಲವೂ ಬಂದ್ ಆಗಿತ್ತು. ಈಗ ಹಾಡಿನ ಶೂಟಿಂಗ್ ನಡೆಸಲು ಪ್ಲಾನ್ ಮಾಡಲಾಗಿದ್ದು, ಸ್ಟೆಪ್ಸ್ ಹಾಕಲು ಸಲ್ಲು ರೆಡಿಯಾಗಿದ್ದಾರೆ.
ಈ ಮೊದಲು ಹೊರದೇಶದಲ್ಲಿ ಸಾಂಗ್ ಶೂಟಿಂಗ್ ಪ್ಲಾನ್ ಮಾಡಲಾಗಿತ್ತು. ಈಗ ಮುಂಬೈನಲ್ಲಿಯೇ ಸೆಟ್ ಹಾಕಿ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ. ನಟಿ ದಿಶಾ ಪಟಾಣಿ ಈ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಶೂಟಿಂಗ್ ವೇಳೆ ಕಡಿಮೆ ಸಂಖ್ಯೆಯ ಟೆಕ್ನಿಷಿಯನ್ಸ್ ಭಾಗವಹಿಸಲಿದ್ದಾರೆ.