ರಾತ್ರೋರಾತ್ರಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ: ಅವನ ನೆಲದಲ್ಲಿಯೇ ಅವನಿಗೆ ಇದೆಂಥಾ ಸ್ಥಿತಿ?

325

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಜಿಲ್ಲೆಯ ಪೀರನವಾಡಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ಇದ್ರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕನ್ನಡಪರ ಸಂಘಟನೆಗಳು ರಾತ್ರೋರಾತ್ರಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿವೆ.

ಇದನ್ನ ಸ್ಥಳೀಯ ಮರಾಠಿ ಭಾಷಿಕರು ವಿರೋಧ ವ್ಯಕ್ತಪಡಿಸಿದ್ದು, ಬೆಳ್ಳಂಬೆಳಗ್ಗೆ ಶಿವಾಜಿಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ರು. ಸ್ಥಳದಲ್ಲಿದ್ದ ಪೊಲೀಸ್ರು ಶಿವಾಜಿಮೂರ್ತಿಯನ್ನ ವಶಕ್ಕೆ ಪಡೆದಿದ್ದು, ಎಂಇಎಸ್ ಕಾರ್ಯಕರ್ತರನ್ನ ಬಂಧಿಸಿದ್ದಾರೆ.

ಕನ್ನಡದ ನೆಲದಲ್ಲಿ ವೀರ ಕನ್ನಡಿಗನ ಪ್ರತಿಮೆ ಪ್ರತಿಷ್ಠಾಪನೆ ವಿಚಾರ ಇಷ್ಟೊಂದು ತಿಕ್ಕಾಟಕ್ಕೆ ಕಾರಣವಾಗಿರುವುದು ಶೋಚನೀಯ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮೌನ ವಹಿಸುವ ಮೂಲಕ, ವೋಟ್ ಪಾಲಿಟಿಕ್ಸ್ ಮಾಡ್ತಿದೆ ಎಂದು ಆರೋಪಿಸಲಾಗಿದೆ. ಸಂಗೊಳ್ಳಿ ರಾಯಣ್ಣ, ಈ ನೆಲದ ವೀರಪುತ್ರ. ಅವನ ನೆಲದಲ್ಲಿ ಅವನ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಇಷ್ಟೊಂದು ಹರಸಾಹಸ ಮಾಡಬೇಕಾ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!