ಶೃಂಗಸಭೆಯಲ್ಲಿ ಪಾಕ್ ತೀವಿದ ಮೋದಿ

351

ಭಯೋತ್ಪಾದನೆಗೆ ಬೆಂಬಲ ನೀಡ್ತಿರುವ ರಾಷ್ಟ್ರಗಳು ಹೆಚ್ಚು ಜವಾಬ್ದಾರಿಯಿಂದ ಇರಬೇಕು ಅಂತಾ ಪ್ರಧಾನಿ ಮೋದಿ ಹೇಳಿದ್ದಾರೆ. ಕರ್ಗಿಸ್ತಾನದ ಬಿಶ್ಕೆಕ್ ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಮಾತ್ನಾಡಿದ ಪ್ರಧಾನಿ ಮೋದಿ, ಪಾಕ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಎಸ್ ಸಿಒ ಶೃಂಗದಲ್ಲಿ ಭಾರತ ಖಾಯಂ ಸದಸ್ಯತ್ವ ಸ್ಥಾನ ಪಡೆದು 12 ವರ್ಷಗಳಾಗುತ್ತಿವೆ. ಎಸ್ ಸಿಒದಲ್ಲಿ ನಾವು ಯಾವಾಗ್ಲೂ ಉತ್ತಮವಾದ ಕೊಡುಗೆ ನೀಡಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಸ್ ಸಿಒದ ಪಾತ್ರ ಮತ್ತು ವಿಶ್ವಸಾರ್ಹತೆಯನ್ನ ಎತ್ತಿ ತೋರಿಸುವ ಕೆಲಸವನ್ನ ಭಾರತ ಮಾಡಿದೆ ಅಂತಾ ಪ್ರಧಾನಿ ಮೋದಿ ಹೇಳಿದ್ರು.

ಎರಡು ದಿನಗಳ ಕಾಲ ನಡೆದ ಶೃಂಗಸಭೆ ಇಂದು ಮುಕ್ತಯವಾಗಿದೆ. ಶಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜೀನ್ ಪಿಂಗ್ ಸೇರಿದಂತೆ ಎಸ್ ಸಿಒ ನಾಯಕರೊಂದಿಗೆ ಮೋದಿ ಫೋಟೋ ತೆಗೆಸಿಕೊಂಡ್ರು. ಕರ್ಗಿಸ್ತಾನದ ಅಧ್ಯಕ್ಷ ಸೀನ್ ಬೆಕೋವ್ ಶೃಂಗಸಭೆಯ ಅಧ್ಯಕ್ಷತೆಯನ್ನ ವಹಿಸಿಕೊಂಡಿದ್ರು.




Leave a Reply

Your email address will not be published. Required fields are marked *

error: Content is protected !!