ಸಿಂದಗಿ ಉಪ ಚುನಾವಣೆಯಲ್ಲಿ ಎಂಆರ್ ಟಿ ಫೈಟ್

1142

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಣ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ರಾಷ್ಟ್ರೀಯ ಪಕ್ಷಗಳ ಜೊತೆಗೆ ಪಕ್ಷೇತರರು ಸಹ ಪೈಪೋಟಿ ನೀಡಲು ಸಜ್ಜಾಗ್ತಿದ್ದಾರೆ. ಉಪ ಕದನದಲ್ಲಿ ಕಾಂಗ್ರೆಸ್ ನಿಂದ ಕಣಕ್ಕೆ ಇಳಿಯಲು ಹಲವರು ಕಸರತ್ತು ನಡೆಸಿದ್ದಾರೆ. ಅವರ ಸಾಲಿಗೆ ಈ ಭಾಗದಲ್ಲಿ ಎಂಆರ್ ಟಿ ಎಂದು ಹೆಸರು ಮಾಡಿರುವ ಗುತ್ತಿಗೆದಾರರಾದ ಮೈಬೂಬ್ ತಾಂಬೋಳಿ ಸೇರಿಕೊಂಡಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ ಅವರು, ತಾಲೂಕಿನಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಹಿಂದೂಳಿದವರು, ದಲಿತರು, ತಳವಾರ ಸಮಾಜದವರು ಸೇರಿದಂತೆ ಸಣ್ಣಪುಟ್ಟ ಸಮುದಾಯದವರು ಸಹ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನಿಂದ ಸ್ಪರ್ಧಿಸಬೇಕು ಎಂದುಕೊಂಡಿದ್ದು ಶೀಘ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರನ್ನ ಭೇಟಿಯಾಗುವುದಾಗಿ ಹೇಳಿದ್ರು. ಕಾಂಗ್ರೆಸ್ ನಮ್ಮ ಮೊದಲ ಆಧ್ಯತೆ. ಜೆಡಿಎಸ್ ನವರು ಸಂಪರ್ಕಿಸಿದ್ದಾರೆ. ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುವುದು. ಯಾವುದು ಆಗದೆ ಹೋದ್ರೆ ಕೊನೆಗೆ ಪಕ್ಷೇತರರಾಗಿಯಾದ್ರೂ ಸ್ಪರ್ಧಿಸುವುದು ಖಚಿತ ಎಂದು ಮೈಬೂಬ್ ತಾಂಬೋಳಿ ತಿಳಿಸಿದ್ದಾರೆ.

ಇದೆ ವೇಳೆ ಮಾತ್ನಾಡಿದ ಪುರಸಭೆಯ ಕಾಂಗ್ರೆಸ್ ನಾಮನಿರ್ದೇಶನ ಮಾಜಿ ಸದಸ್ಯರಾದ ಮುನ್ನಾ ಭೈರಾಮಡಗಿ ಅವರು, ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ್ದೇವೆ. 1978ರಿಂದ ಇದುವರೆಗೂ ನಮ್ಮ ಸಮುದಾಯದವರಿಗೆ ಟಿಕೆಟ್ ನೀಡಿಲ್ಲ. ಸಿಂದಗಿಯಲ್ಲಿ ಸುಮಾರು 42 ಸಾವಿರಕ್ಕೂ ಹೆಚ್ಚು ಮುಸ್ಲಿಂ ಜನಸಂಖ್ಯೆ ಇದ್ದು, ಮೈಬೂಬ್ ತಾಂಬೋಳಿ ಅವರಿಗೆ ಟಿಕೆಟ್ ನೀಡಬೇಕೆಂದು ಕೇಳುತ್ತಿದ್ದೇವೆ. ಈ ಸಂಬಂಧ ಶೀಘ್ರದಲ್ಲಿ ಸಿಂದಗಿಯಲ್ಲಿ ಸಮಾವೇಶ ಮಾಡುತ್ತೇವೆ ಎಂದು ಹೇಳಿದ್ರು.

ಇದೆ ವೇಳೆ ಅಲಿಸಾಬ್, ನೈಯಾಮ್ ತಾಂಬೋಳಿ, ನಿಯಾಜ್ ತಾಂಬೋಳಿ, ಲಕ್ಷ್ಮೀಕಾಂತ ಸೂಡಿ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!