ಮ್ಯಾಟ್ರಿಮೋ(ಹಿ)ನಿ ನಂಬಿ ಮೋಸ ಹೋದ

251

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇವತ್ತು ಪ್ರತಿಯೊಂದು ಆನ್ಲೈನ್ ದುನಿಯಾ ಆಗಿರುವುದ್ರಿಂದ ವರ-ವಧು ಹುಡುಕುವುದು ಸಹ ಆನ್ಲೈನ್ ನಲ್ಲೇ ಆಗಿದೆ. ಇದಕ್ಕಾಗಿ ಹಲವಾರು ವೈಬ್ ಸೈಟ್ ಗಳಿವೆ. ಅಲ್ಲಿ ಹೆಣ್ಣು-ಗಂಡು ರಿಜಿಸ್ಟರ್ ಮಾಡಿ ತಮ್ಮ ಸಂಗಾತಿಯನ್ನ ಹುಡುಕುತ್ತಾರೆ. ಹೀಗೆ ಸಂಗಾತಿ ಹುಡುಕಲು ಹೋದವನು 1 ಲಕ್ಷ ಕಳೆದುಕೊಂಡಿದ್ದಾನೆ.

ಯೆಸ್, ಸಿಲಿಕಾನ್ ಸಿಟಿಯ ಶ್ರೀಕೃಷ್ಣನಗರದ ನಿವಾಸಿ ವಿನಾಯಕ ಎಂಬಾತ ಮ್ಯಾಟ್ರಿಮೋನಿಯಲ್ಲಿ ಹೆಸರು ನೋದಾಯಿಸಿದ್ದಾನೆ. ಬಳಿಕ ತನ್ಗೆ ಇಷ್ಟವಾದ ಹುಡ್ಗಿಯರಿಗೆ ರಿಕ್ವೆಸ್ಟ್ ಕಳುಹಿಸಿದ್ದಾನೆ. ಈ ಕಡೆಯಿಂದ ರಿಕ್ವೆಸ್ಟ್ ಹೋಗಿದ್ದೇ ತಡ ಆ ಕಡೆಯಿಂದ ಕಾಲ್ ಬಂದಿದೆ. ಪೊಲೀಸ್ ಆಯುಕ್ತರ ಕಚೇರಿಯಿಂದ ಕಾಲ್ ಮಾಡ್ತಿದ್ದು, ನೀವು ರಿಕ್ವೆಸ್ಟ್ ಕಳುಹಿಸಿದ ಹುಡ್ಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದಿದ್ದಾರೆ.

ಪೊಲೀಸರು, ಆತ್ಮಹತ್ಯೆ ಅನ್ನೋದು ಕೇಳಿ ಗಾಬರಿಯಾದ ವಿನಾಯಕಗೆ ಏನು ಮಾಡಬೇಕೆಂದು ಗೊತ್ತಾಗಿಲ್ಲ. ಈ ಪ್ರಕರಣ ಹೊರಗೆ ಬರಬಾರದು ಅಂದ್ರೆ ನಾವು ಹೇಳಿದ ಅಕೌಂಟ್ ಗೆ ಹಣ ಹಾಕಬೇಕೆಂದು ಹೇಳಿ ಹಂತ ಹಂತವಾಗಿ 1 ಲಕ್ಷ ರೂಪಾಯಿ ಪಡೆದಿದ್ದಾರೆ. ನಂತರ ವಿನಾಯಕ ಪೊಲೀಸರು ಎಂದು ಹೇಳಿ ಕಾಲ್ ಮಾಡಿದ್ದ ನಂಬರ್ ಗೆ ಫೋನ್ ಮಾಡಿದ್ರೆ ಸ್ವೀಚ್ ಆಫ್. ಮೋಸ ಹೋಗಿದ್ದು ತಿಳಿದು ಬೆಂಗಳೂರು ದಕ್ಷಿಣ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!