ರಂಗಭೂಮಿ ಮಕ್ಕಳ ಬೆಳವಣಿಗೆಗೆ ಸಹಕಾರಿ: ಶಿವಾನಂದ ಶಿವಾಚಾರ್ಯರು

480

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಬೇಸಿಗೆ ಕಲಾ ಮೇಳದಂತಹ ಶಿಬಿರಗಳಿಂದ ಮಕ್ಕಳ ಪ್ರತಿಭೆಗೆ ವೇದಿಕೆ ಸಿಕ್ಕಿದಂತಾಗುತ್ತೆ. ಕಲೆ, ಸಂಸ್ಕೃತಿ, ರಂಗಭೂಮಿ ಮಕ್ಕಳ ಬೆಳವಣಿಗೆಗೆ ಸಹಕಾರಿ ಎಂದು ಪಟ್ಟಣದ ಶಾಂತೇಶ್ವರ(ಊರನ ಹಿರಯಮಠ) ಮಠದ ಪೀಠಾಧ್ಯಕ್ಷರಾದ ಶಿವಾನಂದ ಶಿವಾಚಾರ್ಯರು ಹೇಳಿದರು.

ಪ್ರಜಾಸ್ತ್ರ ವೆಬ್ ಪತ್ರಿಕೆಯ 3ನೇ ವಾರ್ಷಿಕೋತ್ಸವ ಹಾಗೂ ಬೇಸಿಗೆ ಕಲಾ ಮೇಳದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಂಗಭೂಮಿಗೆ ಉತ್ತರ ಕರ್ನಾಟಕದ ಕೊಡುಗೆ ಬಹುದೊಡ್ಡದಿದೆ. ಅದನ್ನು ಉಳಿಸಿಕೊಂಡು ಹೋಗಬೇಕಿದೆ. ಮಕ್ಕಳಿಗೆ ತಂದೆ, ತಾಯಿಯಂದಿರು ಸಂಸ್ಕಾರ ಕೊಡಬೇಕು ಅಂದರೆ ಇಂತಹ ಶಿಬಿರಗಳಿಗೆ ಮಕ್ಕಳನ್ನು ಕಳುಹಿಸಬೇಕು ಎಂದರು.

ಶಿಬಿರದ ಸಂಚಾಲಕ, ಖ್ಯಾತ ಗಾಯಕ ಲಕ್ಷ್ಮಿರಾಮ್ ಮಾತನಾಡಿ, ಬೇಸಿಗೆ ಕಲಾ ಮೇಳ ಅನ್ನೋದು ಮಕ್ಕಳನ್ನು ಇನ್ನಷ್ಟು ಉತ್ತಮರನ್ನಾಗಿ ಮಾಡುತ್ತೇವೆ. ಇಲ್ಲಿ ನೀಡುವ ತರಬೇತಿಯಿಂದ ಬೇರೆ ಬೇರೆ ಕ್ಷೇತ್ರದಲ್ಲಿ ಮಕ್ಕಳನ್ನು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಸಹ ಸಂಚಾಲಕ, ರಂಗಭೂಮಿ ನಿರ್ದೇಶಕ ಲಾಲ್ ಸಾಬ್ ನದಾಫ ಮಾತನಾಡಿ, ಮಕ್ಕಳನ್ನು ಬರೀ ಯಂತ್ರದ ರೀತಿ ಬೆಳೆಸದೆ, ಅವರ ಕನಸುಗಳಿಗೆ ರೆಕ್ಕೆ ಕಟ್ಟುವ ಕೆಲಸವನ್ನು ಪೋಷಕರು ಮಾಡಬೇಕು ಎಂದರು. ಇನ್ನೊಬ್ಬರ ನೋವಿಗೆ, ಸಂಕಷ್ಟಕ್ಕೆ ಮಿಡಿಯುವ ಮನಸ್ಸುನ್ನು ರಂಗಭೂಮಿ ಕಲಿಸಿಕೊಡುತ್ತೆ. ಹೀಗಾಗಿ ಇಂತಹ ಬೇಸಿಗೆ ಕಲಾ ಮೇಳದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಮಕ್ಕಳು ಭಾಗವಹಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರುದೇವ ಆಶ್ರಮದ ಶಾಂತಗಂಗಾಧರ ಮಹಾಸ್ವಾಮಿಗಳು ಮಾತನಾಡಿ, ಕಳೆದ 20 ದಿನಗಳ ಕಾಲ ನಮ್ಮ ಮಠದಲ್ಲಿ ಮಕ್ಕಳ ಬೇಸಿಗೆ ಕಲಾ ಮೇಳ ನಡೆಯಿತು. ಮಕ್ಕಳಲ್ಲಿ ಕಲೆ ಅಡಗಿರುತ್ತೆ. ಅದನ್ನು ಹೊರ ತಗೆಯುವ ಕೆಲಸವಾಗಬೇಕು. ಅದನ್ನು ಪ್ರಜಾಸ್ತ್ರ ವೆಬ್ ಪತ್ರಿಕೆ ನಾಗೇಶ ತಳವಾರ ಮಾಡುತ್ತಿದ್ದಾರೆ. ನಮ್ಮ ಭಾಗದ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲು ಇಂತಹ ಶಿಬಿರಗಳ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯ ಕಾರ್ಯಕ್ರಮಗಳು ನಡೆಯಲಿ ಎಂದು ಹೇಳಿದರು.

ಪ್ರಜಾಸ್ತ್ರ ವೆಬ್ ಪತ್ರಿಕೆಯ ಸಂಪಾದಕ ನಾಗೇಶ ತಳವಾರ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾ ತಳವಾರ ನಿರೂಪಿಸಿದರು. ಸಹನಾ ಹಿರೋಳ್ಳಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!